ನಳಂದ, ಜು 23 (DaijiworldNews/MS): 3 ವರ್ಷದ ಬಾಲಕನೋರ್ವ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಬಿಹಾರ ರಾಜ್ಯದಲ್ಲಿ ನಳಂದದ ಕುಲ್ ಗ್ರಾಮದಲ್ಲಿ ಭಾನುವಾರ ನಡೆದಿದೆ.
100 ಅಡಿ ಆಳದ ತೆರೆದ ಬಾವಿಗೆ ಬಿದ್ದು ಸುಮಾರು 40-50 ಅಡಿ ಆಳದಲ್ಲಿ ಮಗು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಮಗುವಿನ ತಾಯಿ ಹೊಲಕ್ಕೆ ಕೆಲಸಕ್ಕೆ ಬಂದಿದ್ದು, ಮಗನೂ ಜೊತೆಗೇ ಬಂದಿದ್ದ.ಈ ಸಮಯದಲ್ಲಿ ಮಗು ತೆರೆದ ಬೋರ್ ವೆಲ್ ಗೆ ಬಿದ್ದಿದೆ ಎಂದು ಮಹಿಳೆ ಹೇಳಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ರಕ್ಷಣಾ ತಂಡವು ಸ್ಥಳಕ್ಕೆ ಆಗಮಿಸಿ ಬೋರ್ ವೆಲ್ ಗೆ ಆಮ್ಲಜನಕ ಪೂರೈಕೆಗೆ ಪೈಪ್ ಅಳವಡಿಸಿದೆ. ಸ್ಥಳಕ್ಕೆ NDRF ಹಾಗೂ ಇತರ ರಕ್ಷಣಾ ತಂಡಗಳು ಮಗುವನ್ನು ರಕ್ಷಿಸಲು ಧಾವಿಸಿವೆ.
ಮಗುವಿನ ತಾಯಿ ಹೊಲಕ್ಕೆ ಕೆಲಸಕ್ಕೆ ಬಂದಿದ್ದು, ಮಗನೂ ಜೊತೆಗೇ ಬಂದಿದ್ದ.ಈ ಸಮಯದಲ್ಲಿ ಮಗು ತೆರೆದ ಬೋರ್ ವೆಲ್ ಗೆ ಬಿದ್ದಿದೆ ಎಂದು ಮಹಿಳೆ ಹೇಳಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ರಕ್ಷಣಾ ತಂಡವು ಸ್ಥಳಕ್ಕೆ ಆಗಮಿಸಿ ಬೋರ್ ವೆಲ್ ಗೆ ಆಮ್ಲಜನಕ ಪೂರೈಕೆಗೆ ಪೈಪ್ ಅಳವಡಿಸಿದೆ