ಠಾಣೆ, ಎ04(SS): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಆರೆಸ್ಸೆಸ್ ಜತೆ ಸಂಬಂಧ ಕಲ್ಪಿಸಿದ್ದನ್ನು ಆಕ್ಷೇಪಿಸಿ ಸಲ್ಲಿಸಲಾದ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ಠಾಣೆ ಕೋರ್ಟ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದ್ದು, ಕೋರ್ಟಿಗೆ ಹಾಜರಾಗುವಂತೆ ಸೂಚಿಸಿದೆ.
ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತಗಳ ವಿರುದ್ಧ ಮಾತನಾಡುವ ಯಾರೇ ಆಗಲಿ ಅವರ ಮೇಲೆ ಒತ್ತಡ ಹೇರಲಾಗುತ್ತದೆ, ದಾಳಿ ಮಾಡಲಾಗುತ್ತದೆ, ಮಾತ್ರವಲ್ಲ, ಕೆಲವೊಮ್ಮೆ ಕೊಲ್ಲಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಆರೆಸ್ಸೆಸ್ನ ವಿವೇಕ್ ಚಂಪನೇರ್ಕರ್ ಅವರು ವಕೀಲ ಆದಿತ್ಯ ಮಿಶ್ರಾ ಅವರ ಮೂಲಕ ಸಲ್ಲಿಸಿದ ದಾವೆ ಇದಾಗಿದ್ದು, ಏಪ್ರಿಲ್ 30ರಂದು ಕೋರ್ಟಿನಲ್ಲಿ ಹಾಜರಿರುವಂತೆ ರಾಹುಲ್ಗೆ ಸೂಚಿಸಲಾಗಿದೆ.