ಕಲಬುರಗಿ, ಎ04(SS): ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಗೆಲುವು ಶತಃಸಿದ್ದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್,ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೊಕ್ಕಿನ ಮಾತುಗಳನ್ನು ಆಡುವ ಮೂಲಕ ಸುಮಲತಾ ಅವರನ್ನು ಜೆಡಿಎಸ್ ನಾಯಕರು ಅಪಮಾನ ಮಾಡುತ್ತಿದ್ದಾರೆ ಇದಕ್ಕೆಲ್ಲಾ ಏಪ್ರಿಲ್ 18ರಂದು ಉತ್ತರ ಸಿಗಲಿದೆ, ಸುಮಲತಾ ಅಂಬರೀಷ್ ಅವರ ಗೆಲುವು ಶತಃಸಿದ್ದ ಎಂದು ಹೇಳಿದ್ದಾರೆ.
ಸುಮಲತಾ ಅವರ ಕುರಿತು ಜಾತಿ ರಾಜಕಾರಣವನ್ನು ಜೆಡಿಎಸ್ನವರು ಮಾಡುತ್ತಿದ್ದಾರೆ. ಅಲ್ಲಿನ ಎಲ್ಲರೂ ಸಹ ಹಗುರವಾಗಿ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಬೇಸತ್ತಿರುವ ಜನತೆ ಇದೀಗ ಜೆಡಿಎಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೀಗಾಗಿ, ಮಂಡ್ಯದಲ್ಲಿ 100ಕ್ಕೆ 100ರಷ್ಟು ಸುಮಲತಾ ಗೆಲುವು ಕಟ್ಟಿಟ್ಟ ಬುತ್ತಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ 22 ಹಾಗೂ ಒಟ್ಟಾರೆ ಇಡೀ ದೇಶದಲ್ಲಿ 300 ಸೀಟುಗಳನ್ನು ಗೆಲ್ಲಲಿದೆ ಹಾಗೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ಪಡಿಸಿದ್ದಾರೆ.