ಉತ್ತರ ಕನ್ನಡ, ಏ 04(SM): ದೇಶದಲ್ಲಿ ಐಟಿ ಇಲಾಖೆಯವರು ದರೋಡೆಕೋರರು. ಚುನಾವಣೆ ಸಂದರ್ಭದಲ್ಲಿ ದುಡ್ಡು ಹೋಗೋದು ಹೋಗುತ್ತಲೇ ಇದೆ. ಅಲ್ಲಿ ಕ್ರಮ ಕೈಗೊಳ್ಳದವರು ನನ್ನ ಮತ್ತು ನನ್ನ ಬೆಂಗಾವಲು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ ಎಂದು ಸಿಎಂ ಹೆಚ್ ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಯಾರೂ ಇಲ್ಲದ ಸಮಯದಲ್ಲಿ ಅಧಿಕಾರಿಗಳು ನಿಖಿಲ್ ವಾಸ್ತವ್ಯ ಹೂಡಿದ್ದ ಹೊಟೇಲ್ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಅವರಿಗೆ ಅಲ್ಲಿ ಏನು ಸಿಗುತ್ತದೆ? ಇದೆಲ್ಲವೂ ಕೀಳು ಮಟ್ಟದ ರಾಜಕೀಯ. ಎದುರಾಳಿಗಳು ಸಾರ್ವಜನಿಕವಾಗಿ ದುಡ್ಡು ಹಂಚಿದರೂ ಯಾರು ಕೂಡ ಕೇಳುತ್ತಿಲ್ಲ. ಆದರೆ ನಿಖಿಲ್ ಕುಮಾರಸ್ವಾಮಿಯನ್ನು ಗುರಿ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ದೇಶದಲ್ಲಿ ಐಟಿ ಇಲಾಖೆಯವರೇ ದರೋಡೆಕೋರರು. ಅಭ್ಯರ್ಥಿಗಳಿಗೆ, ಸಾರ್ವಜನಿಕರಿಗೆ ಸುಮ್ಮಸುಮ್ಮನೆ ತೊಂದರೆ ನೀಡುತ್ತಿದ್ದಾರೆ. ನಾನು ರಾಜ್ಯದ ಮುಖ್ಯಮಂತ್ರಿ. ನನ್ನನ್ನು 13-14 ಕಡೆ ಚೆಕ್ ಪೋಸ್ಟ್ ಅಂತ ನಿಲ್ಲಿಸಿದ್ದಾರೆ. ಇದಕ್ಕೆಲ್ಲಾ ಅರ್ಥವಿದೆಯಾ? ಎಂದು ಕುಮಾರಸ್ವಾಮಿ ಇಲಾಖೆಯ ಕ್ರಮವನ್ನು ಪ್ರಶ್ನಿಸಿದ್ದಾರೆ.