ನವದೆಹಲಿ,ಏ.07(AZM):ಲೋಕಸಭಾ ಚುನಾವಣೆಯ ಹಿನ್ನಲೆ ಇಂದು ಕಾಂಗ್ರೆಸ್ ಪಕ್ಷವು ಅಬ್ ಹೋಗಾ ನ್ಯಾಯ್ ಎಂಬ ಧ್ಯೇಯ ವಾಕ್ಯದೊಂದಿಗೆ ಚುನಾವಣಾ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದೆ.
ಈ ಹಾಡಿನಲ್ಲಿ ಬರೆಯಲಾದ ಕೆಲವು ಸಾಲುಗಳಿಗೆ ಚುನಾವಣಾ ಆಯೋಗವು ಆಕ್ಷೇಪವೆತ್ತಿದ್ದು, ಆ ಸಾಲುಗಳನ್ನು ತೆಗೆದು ಹಾಕಲಾಗಿದೆ. ಕಾಂಗ್ರೆಸ್ ನ ಪ್ರಸ್ತಾವಿತ ಕನಿಷ್ಠ ಆದಾಯ ಕಾರ್ಯಕ್ರಮ ನ್ಯಾಯ್ ಅನ್ನು ಪ್ರಮುಖವಾಗಿ ಈ ಹಾಡಿನಲ್ಲಿ ಬಿಂಬಿಸಲಾಗಿದೆ. ಇದರ ಜತೆಗೇ ಹಾಡಿನಲ್ಲಿ ರೈತರ ಸಮಸ್ಯೆಗಳು,ನಿರುದ್ಯೋಗ,ನೋಟು ರದ್ದು,ಮಹಿಳಾ ಭದ್ರತೆ ಮತ್ತು ಜಿಎಸ್ ಟಿ ಕುರಿತು ಉಲ್ಲೇಖಿಸಲಾಗಿದೆ.
ಈ ಹಾಡಿನಲ್ಲಿ ಭಾರತದ ಕೋಮು ಸಾಮರಸ್ಯ ಹಾಳಾಗಿದೆ ಎಂದು ಉಲ್ಲೇಖವಾಗಿದ್ದ ಸಾಲುಗಳನ್ನು ಚುನಾವಣಾ ಆಯೋಗ ತೆಗೆಯುವಂತೆ ಹೇಳಲಾಗಿದ್ದು, ಕೇಂದ್ರದ ಎನ್ ಡಿ ಎ ಸರ್ಕಾರ ಸಮಾಜದಲ್ಲಿ ದ್ವೇಷ ಹರಡುತ್ತಿದೆ ಎಂದು ಆ ಸಾಲುಗಳು ಆರೋಪಿಸುವಂತ್ತಿದ್ದವು ಎಂದು ಹೇಳಲಾಗಿದೆ.