ಚೆನೈ,ಏ07(AZM):ಕಾಂಗ್ರೆಸ್ ರ್ಯಾಲಿಯಲ್ಲಿ ಖಾಲಿ ಕುರ್ಚಿಗಳ ಫೋಟೋ ತೆಗೆಯುತ್ತಿದ್ದ ಮಾಧ್ಯಮ ಕ್ಯಾಮರಮ್ಯಾನ್ ಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ವಿರುದ್ಧು ನಗರದಲ್ಲಿ ನಡೆದಿದೆ.
ಕಾಂಗ್ರೆಸ್ ರ್ಯಾಲಿಯಲ್ಲಿ ಹೆಚ್ಚು ಜನರು ಬರದ ಕಾರಣ ಕುರ್ಚಿಗಳು ಖಾಲಿ ಖಾಲಿ ಕಾಣುತ್ತಿದ್ದವು. ಈ ಹಿನ್ನೆಲೆ ಖಾಲಿ ಕುರ್ಚಿಗಳ ಫೋಟೋ ತೆಗೆಯುತ್ತಿದ್ದ ಎಂಬ ಆರೋಪದ ಮೇಲೆ ಫೋಟೋ ಜರ್ನಲಿಸ್ಟ್ಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ತಮಿಳುನಾಡಿನ ವಿರುದ್ಧು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾಧ್ಯಮದ ಕ್ಯಾಮೆರಾಮನ್ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ವಿರುದ್ಧುನಗರದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ರ್ಯಾಲಿ ವೇಳೆ ಈ ಘಟನೆ ನಡೆದಿದೆ.