ಕೊಪ್ಪ,ಏ 08 (MSP): ನಾನೊಬ್ಬ ಪ್ರಾಕ್ಟಿಕಲ್ ಮನುಷ್ಯ, ಬೂಟಾಟಿಕೆ ಪ್ರವೃತ್ತಿ ನನ್ನದಲ್ಲ. ರಾಜಕೀಯವನ್ನು ವೃತ್ತಿಯನ್ನಾಗಿಸಿಕೊಳ್ಳದೆ ನನಗೆ ದೊರಕಿದ ಅಧಿಕಾರದಲ್ಲಿ ಬಡ ಜನಗಳ ಕಷ್ಟಗಳಿಗೆ ಸಮಸ್ಯೆಗೆ ಸ್ಪಂದಿಸುವುದೇ ನನ್ನ ಧ್ಯೇಯವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿದರು.
ಅವರು ಕೊಪ್ಪದಲ್ಲಿ ನಡೆದ ಚುನಾವಣಾ ಪ್ರಚಾರಕ್ಕೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು. ನನ್ನ ಗುರಿ ಏನಿದ್ದರೂ, ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿದೆ. ಮಾತ್ರವಲ್ಲದೆ ರಾಜ್ಯದ ರೈತರ ಪರ ವಿಶೇಷ ಕಾಳಜಿ ನನಗಿದೆ ಎಂದರು. ಇದೇ ವೇಳೆ ಕೆಲವು ಟೀಕೆಗಳಿಗೆ ವಿಷಾದ ವ್ಯಕ್ತಪಡಿಸಿದ ಅವರು, ರಾಜಕೀಯ ಮೌಲ್ಯಗಳು ಕುಸಿಯುತ್ತಿದೆ.ಒಂದಷ್ಟು ರಾಜಕಾರಣಿಗಳು ಚುನಾವಣಾ ಪ್ರಚಾರವನ್ನು ವೇದಿಕೆಯಾಗಿ ಬಳಸಿಕೊಂಡು ವೈಯಕ್ತಿಕ ಟೀಕೆ ಮಾಡುವುತ್ತಾರೆ. ಇಂತಹ ಬೆಳವಣಿಗೆ ಸರಿಯಲ್ಲ ಎಂದರು.
ನನ್ನ ಮಗ ನಿಖಿಲ್ ನನ್ನು ಎಲ್ಲಿದ್ದಿ ಎಂದು ಕರೆದದ್ದನ್ನು ಕೆಲವು ವಾಹಿನಿಗಳು ಹಾಗೂ ವಿರೋಧ ಪಕ್ಷಗಳು ಬಳಸಿಕೊಂಡು ಅಪ ಪ್ರಚಾರ ಮಾಡುತ್ತಿರುವುದಕ್ಕೆ ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.