ತ್ರಿಶೂರು,ಏ08(AZM): ಕೇರಳದ ತ್ರಿಶೂರು ಜಿಲ್ಲೆಯಲ್ಲಿ ಹಿಂದೂ ಧರ್ಮಕ್ಕೆ ಸೇರಿದವರನ್ನು ಮಾತ್ರ ಜಿಲ್ಲಾಧಿಕಾರಿಗಳಾಗಿ ನೇಮಕ ಮಾಡಬೇಕಂತೆ. ಇಂತಹ ಒಂದು ಮತೀಯ ದ್ವೇಷ ಹುಟ್ಟಿಸುವ ಮಾತನ್ನು ಟ್ವೀಟ್ ಮಾಡಿರೋದು ಕೇರಳ ಬಿಜೆಪಿ ವಿಚಾರವಂತರ ಘಟಕದ ಸಂಚಾಲಕರಾದ ಟಿ.ಜಿ. ಮೋಹನ್ ದಾಸ್ ಅವರು.
ತ್ರಿಶ್ಯೂರ್ ಜಿಲ್ಲಾಧಿಕಾರಿಯಾಗಿರುವ ಟಿ.ವಿ. ಅನುಪಮಾ ಐಎ ಎಸ್ ಅವರು ಕ್ರೈಸ್ತ ಧರ್ಮದವರು ಆಗಿದ್ದು, ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕೆಂದು ಮೋಹನ್ ದಾಸ್ ಟ್ವೀಟ್ ಮಾಡಿದ್ದಾರೆ. ತ್ರಿಶ್ಶೂರ್ ಜಿಲ್ಲಾಧಿಕಾರಿ ಎಂದಿಗೂ ಗುರುವಾಯೂರ್ ದೇವಸ್ವಂ ಆಡಳಿತ ಮಂಡಳಿಯಲ್ಲಿ ಸರ್ಕಾರದ ಪ್ರತಿನಿಧಿಯಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಹಿಂದೂ ಧರ್ಮಕ್ಕೆ ಸೇರಿದವರನ್ನು ಮಾತ್ರ ಜಿಲ್ಲಾಧಿಕಾರಿಯನ್ನಾಗಿ ನೇಮಿಸಬೇಕು.ಅನುಪಮಾ ಕ್ರೈಸ್ತ ಧರ್ಮದವರಾಗಿದ್ದರೆ ಅವರನ್ನು ತಕ್ಷಣವೇ ವರ್ಗ ಮಾಡಿ ಎಂದು ಟ್ವೀಟರ್ ನಲ್ಲಿ ಹೇಳಲಾಗಿದೆ.
ಅನುಪಮಾ ಕ್ರೈಸ್ತ ಧರ್ಮದವರೇ? ಆಗಿದ್ದರೆ ಗುರುವಾಯೂರ್ ದೇವಸ್ವಂ ಆಡಳಿತ ಸಮಿತಿಯಿಂದ ಈ ನಿಮಿಷವೇ ರಾಜೀನಾಮೆ ನೀಡಿ ಹೊರ ನಡೆಯಬೇಕು ಎಂದು ಮೋಹನ್ ದಾಸ್ ಟ್ವೀಟಿಸಿದ್ದಾರೆ.