ಚಿಕ್ಕಮಗಳೂರು, ಆ 13 (DaijiworldNews/AK): ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಪ್ರಮಾಣಿಕ ಸರ್ಕಾರ ಅನ್ನುವುದಾದರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸಿ.ಟಿ. ರವಿ ಸವಾಲು ಹಾಕಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿ ಅವರು, ಇದು ನಮ್ಮ ಆರೋಪವಲ್ಲ, ಬಿಬಿಎಂಪಿ ಗುತ್ತಿಗೆದಾರರ ಸಂಘದ ಆರೋಪ ಎಂದು ಹೇಳಿದ ಅವರು ಡಿಕೆಶಿಗೆ ಅಜ್ಜಯ್ಯನ ಮಠದ ಬಗ್ಗೆ ಇರುವ ಭಕ್ತಿಗೆ ಅಲ್ಲಿಗೆ ಕರೆದಿದ್ದಾರೆ. ಅವರು ತಪ್ಪೇ ಮಾಡಿಲ್ಲ ಅಂದ್ರೆ ಹೋಗಿ ಪ್ರಮಾಣ ಮಾಡಬಹುದಲ್ವಾ ಎಂದು ಪ್ರಶ್ನಿಸಿದರು.
ಗುತ್ತಿಗೆದಾರರ ಬಳಿ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಮೊದಲು 7% ಫಿಕ್ಸ್ ಮಾಡಿದ್ರು. ಹೊಸದಲ್ಲ, ಹಳೆಯದ್ದಕ್ಲೆಲ್ಲಾ ಸೇರಿಸಿ ಮದ್ಯವರ್ತಿಗಳು 10% ಅಂದ್ರು. ಆಮೇಲೆ ಚರ್ಚೆ ಮಾಡಿ 15% ಆದ್ರೆ ಮಾತ್ರ ಕ್ಲಿಯರ್ ಎಂದಿದ್ದಾರೆ ಎಂದು ತಿಳಿಸಿದರು.
ಈ ಆರೋಪ ಸುಳ್ಳು ಅನ್ನೊದಾದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಸತ್ಯ ಮಾಡಲಿ. ಸತ್ಯ ಮಾಡುವಾಗ ನನ್ನ ಜೀವನದಲ್ಲೇ ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದ್ರೆ ಸಾಕ್ಷಿಯೇ ಬೇಕಾಗಿಲ್ಲ ಎಂದು ಹೇಳಿದರು.
ಖರ್ಚು ಮಾಡಿರೋದು ವಸೂಲಿ ಆಗಬೇಕು. ಇಲ್ಲ ಹೆಂಡತಿ ಮಕ್ಕಳನ್ನು ಬೀದಿಗೆ ನಿಲ್ಲಿಸಬೇಕಾ ಎಂದ ಅವರು, ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದರು.