ಕಲಬುರಗಿ, ಆ 14 (DaijiworldNews/HR): ಕರ್ನಾಟಕದಲ್ಲಿ,ಕೆಂದ್ರದಲ್ಲಿ ಇನ್ನು ಆರು ತಿಂಗಳಲ್ಲಿ ಬಿಜೆಪಿ ಉಳಿಯುವುದು ಕಷ್ಟ ನಾನು ಇದಕ್ಕೆ ಗ್ಯಾರಂಟಿ ಕೊಡುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು 140 ವರ್ಷ ಪಕ್ಷ ನಡೆಸಿದ್ದೇವೆ. ಹಲಾವಾರು ಬಾರಿ ದೇಶದಲ್ಲಿ, ರಾಜ್ಯದಲ್ಲುಅಧಿಕಾರ ಮಾಡಿದಿವಿ. ಅದರ ಆಧಾರದಲ್ಲಿ ಹೇಳುತ್ತೇನೆ. ಇನ್ನು ಆರು ತಿಂಗಳಲ್ಲಿ ಬಿಜೆಪಿಯಲ್ಲಿ ಎಷ್ಟು ಜನ ಉಳಿದುಕೊಳ್ಳುತ್ತಾರೆ ಅಂತಾ ಕಾದು ನೋಡಿ ಎಂದರು.
ಇನ್ನು ನಮ್ಮ ಸಂಪರ್ಕದಲ್ಲಿಬಿಜೆಪಿಯವರು ಇದ್ದಾರೋ ಇಲ್ಲವೋ ಅನ್ನುವುದಕ್ಕಿಂತ ಅವರೆಷ್ಟು ಜನರೊಂದಿಗೆ ಸಂಪರ್ಕ ಹೊಂದಿದ್ದಾರೆಂದು, ಬಿಜೆಪಿಯ ನಾಯಕರ ನಡೆಯಿಂದ ಅಸಮಾಧಾನ ಇದ್ದಾರೆಂದು ಕೇಳಿ ಎಂದು ಹೇಳಿದ್ದಾರೆ.