ನವದೆಹಲಿ,ಏ08(AZM): 2019ರ ಲೋಕಸಭಾ ಹಿನ್ನಲೆ ಟೈಮ್ಸ್ ನೌ ನಡೆಸಿರುವ ಪೂರ್ವ ಸಮೀಕ್ಷೆ ಪ್ರಕಾರ ಮತ್ತೆ ಎನ್ ಡಿಎಗೆ ಬಹುಮತ ಸಿಗುವ ಸಾಧ್ಯತೆ ಕಂಡುಬರುತ್ತಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ 279 ಸ್ಥಾನ , ಯುಪಿಎ 149, ಇತರೆ 115 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ವರದಿಯಾಗಿದೆ.
2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಮ್ಮ ಮುಂದಿನ ಪ್ರಧಾನಿ ಯಾರಾಗಿರಬಹುದೆಂಬ ಕುತೂಹಲ ಜನರಲ್ಲಿ ಕಾಡುತ್ತಿದ್ದೆ. ಈ ಹಿನ್ನಲೆ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳು ಹೆಚ್ಚು ಕುತೂಹಲ ಕೆರಳಿಸುತ್ತಿದೆ. ಹಾಗಾಗಿ ಟೈಮ್ಸ್ ನೌ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಮತ್ತೆ ಎನ್ ಡಿಎ ಬಹುಮತ ಸಾಧಿಸಿದ್ದು. ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ 279 ಸ್ಥಾನ , ಯುಪಿಎ 149, ಇತರೆ 115 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳುತ್ತಿದೆ. ಏನೇ ಆಗಲಿ ಯಾರು ಗೆಲುವು ಸಾಧಿಸುತ್ತಾರೆ ಅನ್ನೋದನ್ನು ಚುನಾವಣೆಯ ಫಲಿತಾಂಶ ಬಂದ ಬಳಿಕವಷ್ಟೇ ಖಚಿತಪಡಿಸಬಹುದು.