ನವದೆಹಲಿ, ಆ 15 (DaijiworldNews/AK):ಕಳೆದ ಕೆಲವು ವಾರಗಳಿಂದ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಹಲವಾರು ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ನಮ್ಮ ತಾಯಿ ಮತ್ತು ಸಹೋದರಿಯ ಅಗೌರವ ತೋರಲಾಗಿದೆ. ಈಗ ಪ್ರಾಂತ್ಯದಲ್ಲಿ ನಿಧಾನವಾಗಿ ಶಾಂತಿ ಮರಳುತ್ತಿದೆ. ಭಾರತವು ಮಣಿಪುರದೊಂದಿಗೆ ನಿಲ್ಲಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಣಿಪುರದಲ್ಲಿ ಶಾಂತಿಯನ್ನು ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಜೊತೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.
ತಮ್ಮ ಸತತ 10ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯರನ್ನು ಕುಟುಂಬದ ಸದಸ್ಯರು ಎಂದು ಸಂಬೋಧಿಸಿ, ಅವರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಮರುಸ್ಥಾಪನೆಯಾಗಿರುವ ಶಾಂತಿಯನ್ನು ಮಣಿಪುರದ ಜನತೆ ನಿರ್ಮಿಸಬೇಕು. ಶಾಂತಿ ಮಾತುಕತೆಗಳ ಮೂಲಕ ಮಣಿಪುರದಲ್ಲಿ ಪರಿಹಾರ ತರಲಾಗುವುದು” ಎಂದೂ ಅವರು ಹೇಳಿದ್ದಾರೆ.