ಮಹಾರಾಷ್ಟ್ರ,ಏ08(AZM): ಮಹಾರಾಷ್ಟ್ರದ ಗಡ್ಚಿರೋಳಿ ಹಾಗೂ ಚಂದ್ರಾಪುರ ಜಿಲ್ಲೆಗಳಲ್ಲಿ ರವಿವಾರದಂದು ನಡೆಯಬೇಕಾಗಿದ್ದ ಬಿಜೆಪಿ ವರಿಷ್ಠ ಅಮಿತ್ ಶಾ ಅವರ ಚುನಾವಣಾ ರ್ಯಾಲಿ ಸಾರ್ವಜನಿಕರು ಪಾಲ್ಗೊಳ್ಳದೇ ಇದ್ದುದರಿಂದ ರದ್ದುಗೊಳಿಸಲಾಗಿತ್ತು ಎಂದು ಎನ್ ಸಿ ಪಿ ತಿಳಿಸಿದ್ದು, ಇದನ್ನು ಬಿಜೆಪಿ ನಿರಾಕರಿಸಿದೆ.
ಸಾರ್ವಜನಿಕರು ಪಾಲ್ಗೊಳ್ಳದೇ ಇದ್ದುದರಿಂದ ಅಮಿತ್ ಶಾ ರ್ಯಾಲಿಯನ್ನು ರದ್ಧುಗೊಳಿಸಲಾಯಿತು ಎನ್ನುವ ಪ್ರತಿಪಾದನೆಯನ್ನು ನಿರಾಕರಿಸಿರುವ ಬಿಜೆಪಿ, ತಾಂತ್ರಿಕ ಕಾರಣಗಳಿಂದ ಅಮಿತ್ ಶಾ ಅವರ ಚುನಾವಣಾ ರ್ಯಾಲಿ ರದ್ದುಪಡಿಸಲಾಗಿತ್ತು ಎಂದು ಪ್ರತಿಪಾದಿಸಿದೆ.
ಜನರು ರ್ಯಾಲಿಯಲ್ಲಿ ಭಾಗವಹಿಸದೇ ಇರುವುದು ಸಾರ್ವಜನಿಕ ಸಭೆ ರದ್ದುಗೊಳಿಸಲು ನಿಜವಾದ ಕಾರಣ'' ಎಂದು ಎನ್ಸಿಪಿ ರಾಷ್ಟ್ರೀಯ ವಕ್ತಾರ ನವಾಬ್ ಮಲ್ಲಿಕ್ ''23 ಮೇ, ಬಿಜೆಪಿ ಗಾನ್'' ಹ್ಯಾಶ್ ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ್ದಾರೆ. ''ತಾಂತ್ರಿಕ ಕಾರಣದಿಂದ ಮಾತ್ರ ಶಾ ಅವರ ರ್ಯಾಲಿ ರದ್ದುಗೊಳಿಸಲಾಗಿತ್ತು'' ಎಂದು ಮಹಾರಾಷ್ಟ್ರದ ಬಿಜೆಪಿ ವಕ್ತಾರ ಕೇಶವ್ ಉಪಾದ್ಯಾಯ ಹೇಳಿದ್ದಾರೆ.