ರಾಮನಗರ, ಆ 15 (DaijiworldNews/HR): ನಮ್ಮ ವಿರುದ್ಧ ಆರೋಪ ಮಾಡುವುದಕ್ಕೂ ನೈತಿಕತೆ ಬೇಕು ಎಂದು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಕಮಿಷನ್ ವಿಚಾರ ಕುರಿತು ಡಿಕೆಶಿ ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 40% ಕಮಿಷನ್ ತೆಗೆದುಕೊಂಡಿಲ್ಲ, ವರ್ಗಾವಣೆ ದಂಧೆ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ ಅಂತ ಬಿಜೆಪಿಯವರು ಮೊದಲು ಅವರ ಮನೆ ದೇವರ ಮೇಲೆ ಆಣೆ ಮಾಡಲಿ. ನಮ್ಮ ವಿರುದ್ಧ ಆರೋಪ ಮಾಡುವುದಕ್ಕೂ ನೈತಿಕತೆ ಬೇಕು ಎಂದರು.
ಇನ್ನು ನಮ್ಮ ಕಾಂಗ್ರೆಸ್ ಸರ್ಕಾರ ಟೇಕಾಫ್ ಆಗಿ ಈಗಾಗಲೇ ಸಾವಿರಾರು ಕಿಲೋ ಮೀಟರ್ ಮುಂದೆ ಹೋಗಿದ್ದು, ಟೀಕೆ ಮಾಡುವವರು ಮಾಡಲಿ ಬಿಡಿ. ವಿರೋಧ ಪಕ್ಷದ ಕೆಲಸವೇ ಟೀಕೆ ಮಾಡುವುದು ಎಂದಿದ್ದಾರೆ.