ಗುರುಗ್ರಾಮ್, ಆ 16 (DaijiworldNews/AK): ಲಿಫ್ಟ್ ನೊಳಗೆ ಸಾಕು ಶ್ವಾನ ದಾಳಿ ಮಾಡಿದ ಪರಿಣಾಮ ತಾಯಿ ಮತ್ತು 6 ತಿಂಗಳ ಮಗು ಗಾಯಗೊಂಡಿರುವ ಘಟನೆ ಗುರುಗ್ರಾಮದಲ್ಲಿರುವ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ನಡೆದಿದೆ.
ರೆಸಿಡೆನ್ಶಿಯಲ್ ಸೊಸೈಟಿಯ ಲಿಫ್ಟ್ನೊಳಗೆ ಸಾಕು ನಾಯಿಯೊಂದು ದಾಳಿ ಮಾಡಿದ ಹಿನ್ನಲೆ ಮಹಿಳೆ ಮತ್ತು ಆರು ತಿಂಗಳ ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜುಲೈ 28 ರಂದು ರಾತ್ರಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಪತಿ ಜಸ್ವಿಂದರ್ ಸಿಂಗ್ ಶ್ವಾನ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ. ಶ್ವಾನ ಮಾಲೀಕರ ವಿರುದ್ಧ ಸೋಮವಾರ ಸೆಕ್ಟರ್ 50 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಝೋಮ್ಯಾಟೋ ವ್ಯಕ್ತಿಯಿಂದ ಫುಡ್ ಪಾರ್ಸಲ್ ಪಡೆಯಲು ಜುಲೈ 28 ರಂದು ರಾತ್ರಿ 11:30 ರ ಸುಮಾರಿಗೆ ಸಿಂಗ್, ಅವರ ಪತ್ನಿ ಮತ್ತು ಮಗ ನೆಲಮಾಳಿಗೆಗೆ ಹೋಗಲು 7 ನೇ ಮಹಡಿಯಿಂದ ಲಿಫ್ಟ್ಗೆ ಹತ್ತಿದರು ಈ ವೇಳೆ ಐದನೇ ಮಹಡಿಯಲ್ಲಿ ಲಿಫ್ಟ್ ಬಾಗಿಲು ಓಪನ್ ಆಗಿದೆ ಈ ವೇಳೆ ಲಿಫ್ಟ್ ಬಳಿ ಬಂದ ಶ್ವಾನ ಮಹಿಳೆ ಮತ್ತು ಮಗುವಿನ ಮೇಲೆ ದಾಳಿ ಮಾಡಿದೆ ಎಂದು ದೂರು ನೀಡಿದ್ದಾರೆ.