ಬೆಂಗಳೂರು, ಆ 20(DaijiworldNews/MS): ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಬಾಗಿಲು ತಟ್ಟಿದ್ದ ಮಾಜಿ ಸಂಸದ ಆಯನೂರು ಮಂಜುನಾಥ್ಗೆ ಪರಿಷತ್ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಕಾಂಗ್ರೆಸ್ನಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಆಯನೂರು ಎಂಎಲ್ಸಿ ಸದಸ್ಯತ್ವಕ್ಕೆ ರಾಜೀನಾಮೆ ಕೂಡ ಸಲ್ಲಿಸಿದ್ದರು. ಕೊನೆಗೆ ಎಐಸಿಸಿನಿಂದ ಗ್ರೀನ್ ಸಿಗ್ನಲ್ ಸಿಗದೆ ಜೆಡಿಎಸ್ನಿಂದ ಸ್ಪರ್ಧಿಸಿ ಸೋತಿದ್ದರು.
ವಿಧಾನಸಭೆ ಪ್ರವೇಶಿಸುವ ಪ್ರಯತ್ನ ವಿಫಲವಾದರೂ ಮತ್ತೊಮ್ಮೆ ಪರಿಷತ್ ಪ್ರವೇಶಿಸುವ ಆಕಾಂಕ್ಷೆಯಲ್ಲಿದ್ದಾರೆ. 8 ತಿಂಗಳ ಹಿಂದೆ ಮಂಜುನಾಥ್ಗೆ ಟಿಕೆಟ್ ಕೊಡಲು ಮೀನಾಮೇಷ ಎಣಿಸಿದ್ದ ಕಾಂಗ್ರೆಸ್ ನಾಯಕರು ಈಗ ಪರಿಷತ್ನಿಂದ ಕಣಕ್ಕಿಳಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು ಆ ಮೂಲಕ ಬಿಜೆಪಿ ವಲಸಿಗರನ್ನು ಪಕ್ಷಕ್ಕೆ ತರೆತರಲು ಮುಂದಾಗಿದೆ.