ಚೆನ್ನೈ, ಆ 21(DaijiworldNews/MS): "ನೀಟ್ ರದ್ದುಗೊಳಿಸುವವರೆಗೆ ನಾವು ವಿಶ್ರಮಿಸುವುದಿಲ್ಲ" ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಅವರು ವಿದ್ಯಾರ್ಥಿ ಮತ್ತು ವೈದ್ಯಕೀಯ ವಿಭಾಗಗಳು ಭಾನುವಾರ ರಾಜ್ಯಾದ್ಯಂತ ಒಂದು ದಿನದ ಉಪವಾಸ ಸತ್ಯಾಗ್ರಹದ ಸಂದರ್ಭ ಮಾತನಾಡಿದರು.
ವೈದ್ಯಕೀಯ ಕೋರ್ಸ್ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯಾದ ನೀಟ್ ಅನ್ನು ರದ್ದುಗೊಳಿಸುವ ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ತಮ್ಮ ಒಪ್ಪಿಗೆಯನ್ನು ಎಂದಿಗೂ ನೀಡುವುದಿಲ್ಲ ಎಂದು ತಮಿಳುನಾಡು ರಾಜ್ಯಪಾಲ ಆರ್ಎನ್ ರವಿ ಶನಿವಾರ ನೀಡಿದ ಹೇಳಿಕೆಗೆ ವಾಗಾಳಿ ನಡೆಸಿದ ಅವರು, ರಾಜ್ಯವನ್ನು ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆಯಿಂದ (ನೀಟ್) ರದ್ದು ಆಗುವವರೆಗೆ ತಮ್ಮ ಪಕ್ಷವು ವಿಶ್ರಮಿಸುವುದಿಲ್ಲ ಎಂದು ಭಾನುವಾರ ಪ್ರತಿಜ್ಞೆ ಮಾಡಿದ್ದಾರೆ.
ನೀಟ್ ಪರೀಕ್ಷೆಯ ವಿಷಯದಲ್ಲಿ ಎಐಎಡಿಎಂಕೆ ರಾಜ್ಯಕ್ಕೆ "ಅಕ್ಷಮ್ಯ ದ್ರೋಹ ಮಾಡಿದೆ" ಎಂದು ಇದೇ ವೇಳೆ ಆರೋಪಿಸಿದ್ದಾರೆ.