ನವದೆಹಲಿ, ಆ 23 (DaijiworldNews/HR): ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ನೌಕೆ ಚಂದ್ರನ ಅಂಗಳಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದ್ದು, ಕೆಲಹೊತ್ತಿನಲ್ಲೇ ಚಂದ್ರನ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯಲಿದೆ.
ಚಂದ್ರನ ಅಂಗಳದ ಮೇಲೆ ಕೆಲಹೊತ್ತಿನಲ್ಲೇ ವಿಕ್ರಮ್ ಲ್ಯಾಂಡರ್ ಇಳಿಯಲಿದ್ದು, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲಿಂದಲೇ ಈ ಪ್ರಕ್ರಿಯೆಯನ್ನು ವರ್ಚುವಲ್ ಮೂಲಕ ವೀಕ್ಷಿಸಲಿದ್ದಾರೆ.
ಇನ್ನು ಸಂಜೆ 5 ಗಂಟೆ 44 ನಿಮಿಷ ಸುಮಾರಿಗೆ ಚಂದಿರನ ಮೇಲೆ ಗೊತ್ತುಪಡಿಸಿದ ಸ್ಥಳದಲ್ಲಿ ಲ್ಯಾಂಡರ್ ಮಾಡ್ಯೂಲ್ (LM) ಅನ್ನು ಇಳಿಸಲಾಗುವುದು. ಕಾರ್ಯಾಚರಣೆಯ ನೇರ ಪ್ರಸಾರ ಆರಂಭವಾಗಲಿದೆ. ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದಿರನನ್ನು ಸ್ಪರ್ಶ ಮಾಡಲಿದೆ ಎಂದು ವರದಿಯಾಗಿದೆ.