ನವದೆಹಲಿ,ಏ09(AZM):ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ನಿಮ್ಮ ಭ್ರಷ್ಟಾಚಾರದ ಕುರಿತು ಮಾತಾಡುವ ಎಂದು ಚರ್ಚೆಗೆ ಕರೆದಿದ್ದಾರೆ.
ನರೇಂದ್ರ ಮೋದಿಯವರು ಚರ್ಚೆಗೆ ಬರಲು ಹೆದರುತ್ತಿರಬೇಕು. ನಾವು ಕೇಳುವ ವಿಷಯಗಳ ಕುರಿತು ಮಾತಾಡಲು ನರೇಂದ್ರ ಮೋದಿಯವರು ಹೆದರುತ್ತಿದ್ದಾರೆಯೇ ಎಂದಿರುವ ರಾಹುಲ್ ಟ್ವಿಟರ್ ನಲ್ಲಿ ಸ್ಕಾರ್ಡ್ 2 ಡಿಬೆಟ್ ಎನ್ನುವ ನ್ನುವ ಹ್ಯಾಷ್ಟ್ಯಾಗ್ ಮೂಲಕ ಪ್ರಧಾನಿಯನ್ನು ಚರ್ಚೆಗೆ ಕರೆದಿದ್ದಾರೆ.
ರಾಫೇಲ್ ಮತ್ತು ಅಂಬಾನಿ, ನೀರವ್ ಮೋದಿ ಹಾಗೂ ಅಮಿತ್ ಶಾ ಮತ್ತು ನಗದು ರದ್ದತಿ ಈ ಮೂರು ವಿಷಯಗಳ ಬಗ್ಗೆ ಚರ್ಚಿಸಿ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಈ ರೀತಿ ವಾದಕ್ಕೆ ಕರೆಯುತ್ತಿರುವುದು ಇದೇ ಮೊದಲೇನಲ್ಲ. ರಫೇಲ್ ಖರೀದಿ ಕುರಿತಾದ ಚರ್ಚೆ ತಾರಕಕ್ಕೆ ಏರಿದ ಸಂದರ್ಭದಲ್ಲಿ ಮೋದಿ ಮಾತನಾಡಬೇಕು ಎಂದು ಒತ್ತಾಯಿಸಿದ್ದರು. ಈಗಲೂ ರಫೆಲ್ ವಿಷಯ ಪ್ರಸ್ತಾಪಿಸಿರುವ ರಾಹುಲ್ ಅವರು, 'ಉದ್ಯಮಿ ಅನಿಲ್ ಅಂಬಾನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ರಫೇಲ್ ಒಪ್ಪಂದವನ್ನು ರಿಲಯನ್ಸ್ ಡಿಫೆನ್ಸ್ ಕಂಪನಿಗೆ ನೀಡಲಾಗಿದೆ' ಎಂದು ಆರೋಪಿಸಿದ್ದಾರೆ.
ರಫೇಲ್ ಅನಿಲ್ ಅಂಬಾನಿ ಸಮೂಹ ಬಿಡ್ನಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡುವ ಉದ್ದೇಶದಿಂದಲೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಿದ್ದ ಒಪ್ಪಂದನ್ನು ಪ್ರಧಾನಿ ಮೋದಿ ರದ್ದು ಪಡಿಸಿದ್ದಾರೆ ಎಂದು ದೂರಿದರು.
ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ (ಪಿಎನ್ಬಿ) ನಡೆದ ಬಹುಕೋಟಿ ಹಗರಣದ ಕುರಿತು ಮಾತನಾಡಿರುವ ರಾಹುಲ್, 'ಈ ವಂಚನೆಯ ಸೂತ್ರಧಾರಿಯಾಗಿರುವ ವಜ್ರಾಭರಣ ಉದ್ಯಮಿ ನೀರವ್ ಮೋದಿ ಅವರ ಬಗ್ಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮೃದು ಧೋರಣೆಯನ್ನು ಹೊಂದಿದೆ' ಎಂದು ಟೀಕಿಸಿದ್ದಾರೆ.
ಸದ್ಯ ಟ್ವಿಟ್ಟರ್ನಲ್ಲಿ #Scared2Debate ಎಂಬ ಹ್ಯಾಷ್ಟ್ಯಾಗ್ನಡಿ ಕಾಂಗ್ರೆಸ್ ಮತ್ತು ಬಿಜೆಪಿಯ ವಾಗ್ವಾದ ಜೋರಾಗಿದೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ದಿವ್ಯಾ ಸ್ಪಂದನಾ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಬಹುಶಃ ಚರ್ಚಿಸಲು ಪ್ರಧಾನಿ ಮೋದಿ ಅವರಿಗೆ ಭಯವಿರಬೇಕು. ಏಕೆಂದರೆ, ಅವರು ಭ್ರಷ್ಟರು. ಮೋದಿ #Scared2Debate ಬಗ್ಗೆ ನೀವೇನು ಹೇಳುತ್ತೀರೀ?' ಎಂದು ಟೀಕಿಸಿದ್ದಾರೆ.