ಹಿಮಾಚಲ ಪ್ರದೇಶ, ಆ 24 (DaijiworldNews/HR): ಭೀಕರ ಭೂಕುಸಿತ ಸಂಭವಿಸಿ ಹತ್ತಾರು ಮನೆಗಳು ನೆಲಕಚ್ಚಿರುವ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ನಡೆದಿದೆ.
ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಿದ್ದು, ಭೂಕುಸಿತದಿಂದ ಹಲವು ಮನೆಗಳು ಕುಸಿದಿವೆ.
ಇನ್ನು ಒಂದು ವಾರದ ಹಿಂದೆ ಆಡಳಿತ ಮಂಡಳಿ ಈ ಕಟ್ಟಡಗಳಿಂದ ತೆರವು ಮಾಡಿದ್ದರಿಂದ ಈ ಅವಘಡದ ಸಂದರ್ಭದಲ್ಲಿ ಯಾರೂ ಈ ಕಟ್ಟಡಗಳಲ್ಲಿ ವಾಸಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಸಿರಾಜ್ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಹಲವು ಮನೆಗಳು ಕೊಚ್ಚಿ ಹೋಗಿದ್ದು, ಜನ ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.