ಬೆಂಗಳೂರು, ಆ 25 (DaijiworldNews/MS): ಮುಂಗಾರು ಮಳೆ ಕ್ಷೀಣಿಸಿದ ಪರಿಣಾಮ ರಾಜ್ಯದಲ್ಲಿ ನೀರಿನ ಅಭಾವ ತಲೆದೋರಿದ್ದು ಬರದ ಛಾಯೆ ಆವರಿಸಿದ್ದರೂ ಕಾವೇರಿ ನೀರಿಗಾಗಿ ತಗಾದೆ ತೆಗೆದು ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟಿನಲ್ಲಿ ಶುಕ್ರವಾರ ವಿಚಾರಣೆಗೆ ಬರಲಿದೆ.
ತಮಿಳುನಾಡಿನ ಅರ್ಜಿ ಪ್ರಶ್ನಿಸಿ ಕರ್ನಾಟಕ ಕೂಡ ಸುಪ್ರೀಂಕೋರ್ಟ್ಗೆ ಗುರುವಾರ 26 ಪುಟಗಳ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿತಮಿಳುನಾಡಿದ ಆರೋಪದಲ್ಲಿ ಸತ್ಯ ವಿಚಾರ . ಹೀಗಾಗಿ ಆ ಅರ್ಜಿ ವಜಾ ಮಾಡುವಂತೆ ಕೋರಿದೆ.
ಬಿ.ಆರ್. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಮುಂದೆ ಪ್ರಕರಣ ವಿಚಾರಣೆಗೆ ಬರಲಿದ್ದು, ಕರ್ನಾಟಕವು, ಸುಪ್ರೀಂ ಕೋರ್ಟ್ ಆದೇಶದನ್ವಯ ತಮಿಳುನಾಡಿಗೆ ನೀರು ಹರಿಸುತ್ತಿಲ್ಲ. ಜೂನ್, ಜುಲೈ ತಿಂಗಳ ನೀರು ಬಾಕಿ ಉಳಿಸಿಕೊಂಡಿದ್ದು ಆಗಸ್ಟ್ ತಿಂಗಳ ನೀರು ಸೇರ್ಪಡೆಯಾಗಲಿದೆ. ಕರ್ನಾಟಕ ಒಟ್ಟು 36.76 ಟಿಎಂಸಿ ನೀರು ಬಾಕಿ ಉಳಿಸಿಕೊಂಡಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆ ಬಳಿಕವೂ ಸಮರ್ಪಕ ನೀರು ಬಿಟ್ಟಿಲ್ಲ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ.
ಕರ್ನಾಟಕದ ಕಾವೇರಿ ಕೊಳ್ಳದಲ್ಲಿ ಶೇ.42ರಷ್ಟುಮಳೆ ಕೊರತೆ ಆಗಿದೆ. ಕರ್ನಾಟಕದ ಕಾವೇರಿ ಕೊಳ್ಳದಲ್ಲಿರುವ ನೀರು ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿಗೂ ಸಾಲಲ್ಲ.ಹೀಗಿದ್ದರೂ ಕರ್ನಾಟಕ ಆ.22ರ ತನಕ 26 ಟಿಎಂಸಿ ನೀರು ಹರಿಸಿದೆ ಎಂದು ರಾಜ್ಯ ತಿಳಿಸಿದೆ.