ಬೆಂಗಳೂರು, ಆ 26 (DaijiworldNews/MS): ಪ್ರಧಾನಿ ಕಚೇರಿಯಿಂದ ಅಧಿಕೃತ ಆದೇಶ ಬಂದ ಹಿನ್ನೆಲೆಯಲ್ಲಿ ಮೋದಿ ಅವರನ್ನು ಶಿಷ್ಟಾಚಾರದ ಪ್ರಕಾರ ಅವರನ್ನು ಸ್ವಾಗತಿಸುವುದಕ್ಕೆ ಏರ್ಪೋರ್ಟ್ಗೆ ಹೋಗಿರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ದೇಶದ ಪ್ರಧಾನಿ ರಾಜ್ಯಕ್ಕೆ ಬಂದಾಗ ಯಾವ ರೀತಿ ಗೌರವಯತವಾಗಿ ಸ್ವಾಗತಿಸಬೇಕು ಎಂದು ಮುಖ್ಯಮಂತ್ರಿ ಸೇರಿದಂತೆ ನಮಗೆಲ್ಲ ಚೆನ್ನಾಗಿ ತಿಳಿಸಿದೆ. ಇದರಲ್ಲಿ ಯಾವತ್ತೂ ರಾಜಕೀಯ ಮಾಡುವುದಿಲ್ಲ. ದೇಶದ ಪ್ರಧಾನಿ ಬಂದಾಗ ಗೌರವದಿಂದ ನಡೆಸಿಕೊಳ್ಳುವುದು ನಮ್ಮ ಕರ್ತವ್ಯ. ಆದರೆ ಪ್ರಧಾನಿ ಕಚೇರಿಯಿಂದಲೇ ಅಧಿಕೃತವಾಗಿ ಯಾರು ಬರುವುದು ಬೇಡ ಎಂಬ ಸೂಚನೆ ಬಂದ ಕಾರಣಕ್ಕೆ ಸ್ವಾಗತಿಸಲು ಯಾರು ಹೋಗಿರಲಿಲ್ಲ ಎಂದಿದ್ದಾರೆ.
ಗ್ರೀಸ್ ದೇಶದ ಅಥೆನ್ಸ್ ನಗರದಿಂದ ನೇರವಾಗಿ ನರೇಂದ್ರ ಮೋದಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ ಎನ್ನುವುದು ಅಧಿಕೃತವಾಗುತ್ತಿದ್ದಂತೆಯೇ ರಾಜಕೀಯ ಕೆಸರೆರೆಚಾಟ ಆರಂಭವಾಗಿತ್ತು. ರಾಜಕೀಯ ಕ್ರೆಡಿಟ್ ವಾರ್ ಅಪವಾದ ಬೇಡ ಎನ್ನುವ ಕಾರಣಕ್ಕಾಗಿ ರಾಷ್ಟ್ರ ಬಾವುಟ, ಇಸ್ರೋ ಸಾಧನೆ ಕುರಿತಾದ ಪ್ಲೇಕಾರ್ಡ್ ಹೊರತಾಗಿ ಪಕ್ಷದ ಯಾವುದೇ ಧ್ವಜ ಇರಬಾರದು ಎಂದು ಸೂಚನೆ ನೀಡಲಾಗಿತ್ತು.
ಮೋದಿ ತಮ್ಮ ಮೊದಲ ಭಾಷಣದಲ್ಲಿ ಮತ್ತು ಇಸ್ರೋ ಕಚೇರಿಯಲ್ಲಿನ ಭಾಷಣದಲ್ಲಿ ರಾಜಕೀಯ ಬೆರೆಸದೆ ಸಂಪೂರ್ಣವಾಗಿ ವಿಜ್ಞಾನಿ, ವಿಜ್ಞಾನ, ಇಸ್ರೋ ಹೊರತಾಗಿ ಬೇರೇನೂ ಮಾತನಾಡಲು ಹೋಗಿರಲಿಲ್ಲ. ಹೆಚ್ಎಎಲ್ಗೆ ಹಿಂತಿರುಗಿ ದೆಹಲಿಗೆ ವಾಪಸ್ ಆಗುವ ಮಾರ್ಗದಲ್ಲಿಯೂ ಅಷ್ಟೆ, ಮೋದಿ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಲಿಲ್ಲ