ಬೆಂಗಳೂರು, ಆ 26 (DaijiworldNews/HR): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಇಡೀ ತಂಡವನ್ನೇ ಬದಲಿಸಬೇಕಿದ್ದು, ಶೀಘ್ರದಲ್ಲೇ ಕೆಪಿಸಿಸಿ ಪುನಾರಚನೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೆಪಿಸಿಸಿಯಲ್ಲಿ ಅನೇಕರು ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದು, ಅವರನ್ನು ಪಕ್ಷದ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕಿದೆ. ಹೀಗಾಗಿ ಹೊಸಬರಿಗೆ ಪಕ್ಷದಲ್ಲಿ ಅವಕಾಶ ಮಾಡಿಕೊಡಬೇಕಿದೆ ಎಂದರು.
ಇನ್ನು ಹೊಸಬರಿಗೆ ಪಕ್ಷದಲ್ಲಿ ಅವಕಾಶ ಮಾಡಿಕೊಡಬೇಕಿದ್ದು, ಶೀಘ್ರದಲ್ಲೇ ವರಿಷ್ಠರು ಕೆಪಿಸಿಸಿಗೆ ಹೊಸ ತಂಡವನ್ನು ನೇಮಿಸಲಿದೆ ಎಂದು ತಿಳಿಸಿದ್ದಾರೆ.