ಮಹಾರಾಷ್ಟ್ರ ಆ 28 (DaijiworldNews/MS): ರಾಜಕೀಯದಲ್ಲಿ ಶಾಶ್ವತ ಶತ್ರುಗಳು ಮತ್ತು ಮಿತ್ರರು ಇರುವುದಿಲ್ಲ. ರಾಜ್ಯದಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಬಣವು ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಮೈತ್ರಿಕೂಟಕ್ಕೆ ಸೇರಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಬೀಡಿನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಜಿತ್ ಪವಾರ್ "ಜನರ ಸಮಸ್ಯೆ ಪರಿಹರಿಸಲು ನಾವು ಮಹಾಯುತಿ (ಬಿಜೆಪಿ, ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ಅಜಿತ್ ಪವಾರ್ ಮೈತ್ರಿ) ಸೇರಿಕೊಂಡಿದ್ದೇವೆ, ನಾವು ರಾಜ್ಯದ ಅಭಿವೃದ್ಧಿಗಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ. ಮಹಾಯುತಿ ಮೈತ್ರಿಕೂಟದಲ್ಲಿದ್ದರೂ ಎಲ್ಲ ಜಾತಿ, ಧರ್ಮದ ಜನರನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಮಹಾರಾಷ್ಟ್ರದ ಜನತೆಗೆ ಹೇಳುತ್ತೇನೆ" ಎಂದು ಹೇಳಿದ್ದಾರೆ.
ನಾವು ಯಾವಾಗಲೂ ರೈತರ ಹಿತಕ್ಕಾಗಿ ಕೆಲಸ ಮಾಡುತ್ತೇವೆ, ಹೊಲಗಳಲ್ಲಿ ನೀರಿಲ್ಲದೆ ಬೇಸಾಯ ನಡೆಯುವುದಿಲ್ಲ, ನಾನು ರಾಜ್ಯದಲ್ಲಿ ಜಲಸಂಪನ್ಮೂಲವಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದಿದ್ದಾರೆ.