ಹರ್ಯಾಣ, ಆ 28 (DaijiworldNews/HR): ಹರ್ಯಾಣದಲ್ಲಿ ಚಾಲಕನೊಬ್ಬ ವೈದ್ಯನಿಗೆ ಕಾರು ಡಿಕ್ಕಿ ಹೊಡೆಸಿ ಬಾನೆಟ್ ಮೇಲೆ 50 ಮೀಟರ್ ಎಳೆದೊಯ್ದ ಘಟನೆ ನಡೆದಿದೆ.
ವೈದ್ಯರು ಟ್ಯೂಷನ್ಗೆ ಹೋಗಿದ್ದ ಮಕ್ಕಳನ್ನು ಕರೆತರಲು ಹೋಗಿದ್ದರು, ಆ ಸಮಯದಲ್ಲಿ ವೈದ್ಯರ ಕಾರಿಗೆ ಯಾವುದೋ ಕಾರೊಂದು ಡಿಕ್ಕಿ ಹೊಡೆದಿತ್ತು. ಅದನ್ನು ಪ್ರಶ್ನಿಸಲು ಕಾರಿನಿಂದ ಕೆಳಗಿಳಿದಿದ್ದ ಸಂದರ್ಭದಲ್ಲಿ ಕಾರು ಚಾಲಕ ವೈದ್ಯರಿಗೆ ಡಿಕ್ಕಿ ಹೊಡೆದು ಬಾನೆಟ್ ಮೇಲೆ 50 ಮೀಟರ್ನಷ್ಟು ದೂರ ಎಳೆದೊಯ್ದಿದ್ದಾನೆ.
ಇನ್ನು ಕರ್ ಮಲಿಕ್ ಎಂದು ಗುರುತಿಸಲಾದ ಆರೋಪಿಯು ತನಗೆ ಬೆದರಿಕೆ ಹಾಕಿ ಚಾಕುವನ್ನು ಸಹ ತೋರಿಸಿದ್ದಾನೆ ಎಂದು ವೈದ್ಯ ಗಗನ್ ಗಾರ್ಗ್ ಆರೋಪಿಸಿದ್ದಾರೆ.
ಯುವಕನೊಬ್ಬ ಘಟನೆಯ ಸಂಪೂರ್ಣ ವಿಡಿಯೋ ಮಾಡಿದ್ದು, ಈ ವಿಡಿಯೋ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ