ಶಿರಸಿ, ಆ 28 (DaijiworldNews/HR): ಸರಕಾರಿ ಶಾಲೆಗಳ ಖಾಸಗೀಕರಣಕ್ಕೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಮಗೆ ಎಲ್ಲರ ಸಹಕಾರ ಬೇಕು. ವಿವಿಧ ಕಂಪನಿಗಳ ಸಾಮಾಜಿಕ ಜವಬ್ದಾರಿ ಹಣವನ್ನು ಶಿಕ್ಷಣಕ್ಕೆ ಕೊಡಲು ಮನವಿ ಮಾಡಲಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವದು ನಮ್ಮ ಜವಬ್ದಾರಿ ಇದೆ ಎಂದರು.
ಇನ್ನು ಕೆಪಿಎಸ್ ಮಾದರಿಯ ಶಾಲಾ ಆವರಣ ರಾಜ್ಯದ 6000 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಮ್ಮ ಅವಧಿಯಲ್ಲಿ ಗರಿಷ್ಠ 2000 ಮಾಡಲು ಯೋಜಿಸಿದ್ದೇವೆ. ಅಂಗನವಾಡಿಯಿಂದ ಪಿಯುಸಿ ತನಕ ನಡೆಯಲಿದೆ. ಇದರಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಅನುಕೂಲ ಆಗಲಿದೆ ಎಂದು ಹೇಳಿದ್ದಾರೆ.