ಮುಂಬೈ, ಆ 29 (DaijiworldNews/AK): ಇದೀಗ ಮಹಾರಾಷ್ಟ್ರದ ಮಹಿಳೆಯೊಬ್ಬರು ಬಾಯ್ಫ್ರೆಂಡ್ಗಾಗಿ ಪಾಕಿಸ್ತಾನಕ್ಕೆ ತೆರಳಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಲ್ಲದೇ ಈ ಮಹಿಳೆಗೆ ಉಗ್ರರ ನಂಟಿರುವ ಶಂಕೆ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಸಂಭಾಜಿ ನಗರ ನಿವಾಸಿಯಾದ ಅಫ್ರಿನ್ ಶೇಖ್ (32) ವಿವಾಹವಾಗಿದ್ದು ನಾಲ್ವರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯು ದುಬೈ ಮೂಲಕ ಪಾಕಿಸ್ತಾನಕ್ಕೆ ತೆರಳಿರುವ, ಆಕೆ ಉಗ್ರರ ಜತೆ ನಂಟು ಹೊಂದಿರುವ ಕುರಿತು ಮಹಾರಾಷ್ಟ್ರ ಪೊಲೀಸರಿಗೆ ಅನಾಮಧೇಯ ಹೆಸರಿನಲ್ಲಿ ಇ-ಮೇಲ್ ಒಂದು ಬಂದಿದೆ.ಹೀಗಾಗಿ ಮುಂಬೈ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
2022ರ ಡಿಸೆಂಬರ್ನಲ್ಲಿಯೇ ಅಫ್ರಿನ್ ಶೇಖ್ ದುಬೈಗೆ ತೆರಳಿದ್ದಾಳೆ. ಆಕೆ ವಾಪಸ್ ಬರದ ಕಾರಣ ಪತಿಯು ಪೊಲೀಸರಿಗೆ ದೂರು ನೀಡಿದ್ದಾರೆ.
ಆದರೆ, ಅಫ್ರಿನ್ ಶೇಖ್ ದುಬೈನಿಂದ ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಪಾಕಿಸ್ತಾನದಲ್ಲಿ ಬಾಯ್ಫ್ರೆಂಡ್ನನ್ನು ಮದುವೆಯಾಗಿ ನಂತರ ಲಿಬಿಯಾಗೆ ತೆರಳಿದ್ದಾಳೆ. ಅಲ್ಲಿ ಆಕೆಗೆ ಉಗ್ರ ಸಂಘಟನೆಯೊಂದು ತರಬೇತಿ ನೀಡುತ್ತಿದೆ ಎಂಬುದಾಗಿ ಮೇಲ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಹಾಗಾಗಿ, ಉಗ್ರ ನಿಗ್ರಹ ದಳ, ಪೊಲೀಸರು, ಗುಪ್ತಚರ ಇಲಾಖೆ ಅಧಿಕಾರಿಗಳು ಮಹಿಳೆಯ ಪ್ರವಾಸ, ಆಕೆ ಉಗ್ರರ ಜತೆ ಹೊಂದಿರುವ ನಂಟಿನ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಸಿಕ್ ಜಿಲ್ಲೆಯ ಮಹಿಳೆಯೊಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮಹಿಳೆಯ ಪತಿ ಮತೀನ್ ಚೌಧರಿಯು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.