ಮುಂಬೈ, ಸ 02 (DaijiworldNews/HR): ಬ್ಯಾಂಕ್ಗೆ ಸಂಬಂಧಿಸಿದ 538 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಮುಂಬೈನಲ್ಲಿರುವ ಇಡಿ ಕಚೇರಿಯಲ್ಲಿ ಸುದೀರ್ಘ ವಿಚಾರಣೆಯ ಬಳಿಕ ಗೋಯಲ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.
ಇನ್ನು ಕೆನಾರಾ ಬ್ಯಾಂಕ್ ಮೇ 3ರಂದು ಸಿಬಿಐಗೆ ನೀಡಿದ ದೂರಿನ ಆಧಾರದಲ್ಲಿ ಕಾನೂನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಜೆಟ್ ಏರ್ ವೇಸ್ 2005ರಿಂದಲೂ ಕೆನರಾ ಬ್ಯಾಂಕ್ ಜತೆ ವ್ಯವಹರಿಸುತ್ತಿದ್ದು, ಎಸ್ ಬಿಐ ನೇತೃತ್ವದ ಒಕ್ಕೂಟ ವ್ಯವಸ್ಥೆಯಡಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದೆ.
ಗೋಯಲ್ ಪತ್ನಿ ಅನಿತಾ, ಗೌರಂಗ್ ಶೆಟ್ಟಿ ಮತ್ತು ಇತರ ಅಪರಿಚಿತರನ್ನು ಕೂಡಾ ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ.