ಬೆಂಗಳೂರು, ಸೆ 05 (DaijiworldNews/MS): ರಾಜ್ಯ ಸರ್ಕಾರ ರಾತ್ರೋರಾತ್ರಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದೆ. ಕಳೆದ ಎರಡು ದಿನಗಳ ಹಿಂದಷ್ಟೇ 2018, 2019 ಮತ್ತು 2020ರ ಬ್ಯಾಚ್ನ ಹತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು.
ಈಗ ಮತ್ತೆ ರಾಜ್ಯದ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಸ್ಥಳ ಕೂಡ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಖಡಕ್ ಆಫಿಸರ್ ಎಂದು ಹೆಸರುವಾಸಿಯಾಗಿದ್ದ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಮಂಗಳೂರು ಪೊಲೀಸ್ ಕಮಿಷನರ್ ಕುಲ್ದೀಪ್ ಕುಮಾರ್ ಜೈನ್ ಕೂಡ ವರ್ಗಾವಣೆಗೊಂಡಿದ್ದು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅನುಪಮ್ ಅಗರ್ವಾಲ್ ನೇಮಕಗೊಂಡಿದ್ದಾರೆ.
ಅನುಪಮ್ ಅಗರವಾಲ್- ಮಂಗಳೂರು ಕಮೀಷನರ್ ಆಗಿ ವರ್ಗಾವಣೆ
ಡಾ.ಎಸ್. ಡಿ ಶರಣಪ್ಪ- ಡಿಐಜಿಪಿ, ಪೊಲೀಸ್ ಅಕಾಡೆಮಿ, ಮೈಸೂರು
ವರ್ತಿಕಾ ಕಟಿಯಾರ್- ಎಸ್ಪಿ, ಐಎಸ್ಡಿ, ಬೆಂಗಳೂರು
ಕಾರ್ತಿಕ್ ರೆಡ್ಡಿ- ಡಿಸಿಪಿ, ದಕ್ಷಿಣ ವಿಭಾಗ ಸಂಚಾರ, ಬೆಂಗಳೂರು
ಸಂತೋಷ್ ಬಾಬು- ಡಿಸಿಪಿ, ಆಡಳಿತ ವಿಭಾಗ ಬೆಂಗಳೂರು
ಯತೀಶ್ ಚಂದ್ರ- ಎಸ್ಪಿ, ಐಎಸ್ಡಿ, ಬೆಂಗಳೂರು
ಭೀಮಾಶಂಕರ ಗುಳೇದ್- ಎಸ್ಪಿ, ಬೆಳಗಾವಿ
ನಿಕ್ಕಂ ಪ್ರಕಾಶ್ ಅಮೃತ್- ಎಸ್ಪಿ, ವೈರ್ಲೆಸ್
ರಾಹುಲ್ ಕುಮಾರ್ ಶಹಪೂರ್ವಾಡ್- ಡಿಸಿಪಿ, ದಕ್ಷಿಣ ವಿಭಾಗ, ಬೆಂಗಳೂರು
ಡಿ. ದೇವರಾಜು- ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು
ಅಬ್ದುಲ್ ಅಹದ್- ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು.
ಸಂಜೀವ್ ಪಾಟೀಲ್- ಡಿಸಿಪಿ, ವೈಟ್ ಫೀಲ್ಡ್
ಎಸ್. ಗಿರೀಶ್- ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು
ಪರಶುರಾಮ್- ಎಸ್ಪಿ, ಗುಪ್ತವಾರ್ತೆ, ಬೆಂಗಳೂರು
ಹೆಚ್.ಡಿ. ಆನಂದ್ ಕುಮಾರ್- ಎಸ್ಪಿ, ನಿರ್ದೇಶಕರು, ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ
ಸುಮನ್ ಡಿ. ಪನ್ನೇಕರ್- ಎಐಜಿಪಿ, ಹೆಡ್ ಕ್ವಾರ್ಟರ್ಸ್
ಡೆಕ್ಕಾ ಕಿಶೋರ್ ಬಾಬು- ಪ್ರಿನ್ಸಿಪಲ್ ಪೊಲೀಸ್ ಟ್ರೈನಿಂಗ್ ಸೆಂಟರ್, ಕಲಬುರಗಿ