ಬೆಂಗಳೂರು, ಸೆ 05 (DaijiworldNews/MS): ಕೊಲ್ಕೊತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಧೂಮಪಾನ ಮಾಡಿದ್ದ ಆರೋಪದಲ್ಲಿ ಜಿ ಕರುಣಾಕರನ್ ಎಂಬ ಪ್ರಯಾಣಿಕನನ್ನು ಕೆಂಪೇಗೌಡ ಏರ್ಪೋರ್ಟ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 3 ರ ರಾತ್ರಿ 9.11 ಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗಿದೆ. ಈ ವೇಳೆ ಪ್ರಯಾಣಿಕರು ಸುಟ್ಟ ವಾಸನೆ ಬರುತ್ತಿರುವುದಾಗಿ ಸಿಬ್ಬಂದಿಯ ಗಮನಕ್ಕೆ ತಂದಿದ್ದರು.
ಕೂಡಲೇ ಪರಿಶೀಲಿಸಿದಾಗ ಕುರುಣಾಕರಣ್ ವಿಮಾನದ ಶೌಚಾಲಯದೊಳಗೆ ಬೀಡಿ ಸೇದುತ್ತಿರುವುದು ಕಂಡುಬಂದಿದ್ದು,ಕರುಣಾಕರನ್ ತಕ್ಷಣವೇ ಅರ್ಧ ಸೇದಿದ ಬೀಡಿಯನ್ನು ಶೌಚಾಲಯದೊಳಗೆ ಹಾಕಿ ಫ್ಲೆಶ್ ಮಾಡಲು ಯತ್ನಿಸಿದರು ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ.
ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆದ ಕೂಡಲೇ ಆತನನ್ನು ಬಂಧಿಸಲಾಗಿದೆ.