ಲಕ್ನೋ, ಸೆ 06 (DaijiworldNews/MS): ದೇಶದ ಹೆಸರನ್ನು ರಾಜಕೀಯಕ್ಕೆ ಬಳಸುವ ಪಕ್ಷಗಳನ್ನುಸುಪ್ರೀಂ ಕೋರ್ಟ್ ರದ್ದು ಮಾಡಬೇಕೆಂದು ಬಿಎಸ್ಪಿನಾಯಕಿ ಮಾಯಾವತಿ ಆಗ್ರಹಿಸಿದ್ದಾರೆ.
ಲಕ್ನೋನಲ್ಲಿಮಾತನಾಡಿದ ಅವರು, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಇಂಡೀಯಾ ಎಂದು ಮೈತ್ರಿಕೂಟವನ್ನು ಹೆಸರಿಸುವುದರ ವಿರುದ್ಧ ಸುಪ್ರೀಂ ಕೋರ್ಟ್ಗೆ ಹೋಗಬೇಕಿತ್ತು ಅಥವಾ ಕಾನೂನನ್ನು ತರುವ ಮೂಲಕ ನಾಮಕರಣವನ್ನು ನಿಷೇಧಿಸಬೇಕಿತ್ತು ಎಂದು ಅವರು ಹೇಳಿದ್ದಾರೆ
ಇದು ಆಡಳಿತ ಮತ್ತುಪ್ರತಿಪಕ್ಷಗಳು ಸೇರಿ ಮಾಡುತ್ತಿರುವ ವ್ಯವಸ್ಥಿತ ಪಿತೂರಿ. ಮೈತ್ರಿಕೂಟಕ್ಕೆ ಇಂಡಿಯಾ
ಎಂದು ನಾಮಕರಣ ಮಾಡಿ ವಿಪಕ್ಷಗಳೇ ಆಡಳಿತ ಪಕ್ಷಕ್ಕೆಸಂವಿಧಾನ ತಿದ್ದುಪಡಿಗೆ ಅವಕಾಶ ನೀಡಿವೆ.
ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿಯ ‘ಭಾರತ್ ವರ್ಸಸ್ ಇಂಡಿಯಾ’ ಯೋಜನೆಯನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಎರಡೂ ಪಕ್ಷಗಳು, ಬಡತನ, ಹಣದುಬ್ಬರ , ನಿರುದ್ಯೋಗ ಮತ್ತು ಅಭಿವೃದ್ಧಿಯ ಅಗತ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಿವೆ. ಇದೆಲ್ಲವೂ ಆಡಳಿತ ಮತ್ತು ವಿರೋಧ ಪಕ್ಷದ ಆಂತರಿಕ ಒಪ್ಪಂದದಿಂದ ನಡೆಯುತ್ತಿದೆ ಎಂಬ ಆತಂಕವಿದೆ. ಇದನ್ನು ಖಂಡಿಸಬೇಕು ಎಂದು ಮಾಯಾವತಿ ಹೇಳಿದಾರೆ.