ನವದೆಹಲಿ, ಸೆ 09 (DaijiworldNews/MS): ಇಂದಿನಿಂದ ದೆಹಲಿಯಲ್ಲಿ 20 ಶೃಂಗಸಭೆಯ ಎರಡು ದಿನಗಳ ಕಾರ್ಯಕ್ರಮ ಆರಂಭವಾಗಿದೆ. ಅಮೆರಿಕ, ಫ್ರಾನ್ಸ್, ಜಪಾನ್, ಬ್ರಿಟನ್, ಇಟಲಿ, ಟರ್ಕಿ ಸೇರಿದಂತೆ ಸದಸ್ಯ ರಾಷ್ಟ್ರಗಳ ಮತ್ತು ಅತಿಥಿ ರಾಷ್ಟ್ರಗಳ ಮುಖ್ಯಸ್ಥರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ದೆಹಲಿ ತಲುಪಿದ್ದಾರೆ.
ಭಾರತ್ ಮಂಟಪದ ಲಾಂಜ್ನಲ್ಲಿ ಬೆಳಗ್ಗೆ 9:30ಕ್ಕೆ ಅತಿಥಿಗಳ ಸಭೆ ಆರಂಭವಾಗಿದ್ದು. ಮೊದಲ ಅಧಿವೇಶನವು 10:30ಕ್ಕೆ 'ಒನ್ ಅರ್ಥ್' ವಿಷಯದಲ್ಲಿ ನಡೆಯಲಿದ್ದು, ಬಳಿಕ ಮಧ್ಯಾಹ್ನ 3 ಗಂಟೆಗೆ ‘ಒಂದು ಕುಟುಂಬ’ ಕುರಿತು ಎರಡನೇ ಗೋಷ್ಠಿ ಜರುಗಲಿದೆ.
ಜಿ20 ಶೃಂಗಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಜಿ20 ಒಕ್ಕೂಟಕ್ಕೆ ಆಫ್ರಿಕನ್ ಒಕ್ಕೂಟ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದ್ದಾರೆ.. ಆ ಮೂಲಕ ಜಿ20 ಒಕ್ಕೂಟದ 21ನೇ ದೇಶವಾಗಿ ಆಫ್ರಿಕನ್ ಒಕ್ಕೂಟ ಸೇರ್ಪಡೆಯಾದಂತಾಗಿದೆ.