ಬೆಂಗಳೂರು, ಸೆ10 (DaijiworldNews/MS): ಬಿಜೆಪಿ ಹಾಗೂ ಜೆಡಿಎಸ್ ಜೊತೆ ಮೈತ್ರಿ ಪೈನಲ್ ಆಗಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆ ನಡೆದಿರುವುದು ನಿಜ ಎಂದು ಸ್ವತಃ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಹೇಳಿದ್ದಾರೆ.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿನಡೆದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ಮೋದಿ ಜೊತೆ ಮಾತುಕತೆ ನಡೆದಿರುವುದು ನಿಜ. ಆದರೆ ಸೀಟು ಹಂಚಿಕೆ ಕುರಿತಂತೆ ಇನ್ನು ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ಇಷ್ಟು ಸೀಟು ಬೇಕು ಎಂದು ಕೇಳುವುದಿಲ್ಲ, ಸೀಟು ಹಂಚಿಕೆ ಬಗ್ಗೆ ಮೋದಿ ಜೊತೆ ಕುಮಾರಸ್ವಾಮಿ ಮಾತುಕತೆ ನಡೆಸುತ್ತಾರೆ. ಬಿಜೆಪಿಯೇ ನಮ್ಮನ್ನು ಸಂಪರ್ಕ ಮಾಡಿ ಮಾತಾಡಿದ್ದಾರೆ. ನಾವು ಪಕ್ಷಕ್ಕಾಗಿ ಬಿಜೆಪಿಯ ಹೈಕಮಾಂಡ್ ದೆಹಲಿ ಸಂಪರ್ಕ ಮಾಡಿದ್ದೇನೆ. ಪ್ರತಿಕ್ಷೇತ್ರದ ಪರಿಸ್ಥಿತಿ ವಿವರಿಸಿದ್ದೇನೆ ಎಂದು ಹೇಳಿದ್ದಾರೆ.