ನವದೆಹಲಿ, ಸೆ 15 (DaijiworldNews/HR): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಳುಹಿಸಿರುವ ಆದಿತ್ಯ-ಎಲ್1 ನೌಕೆ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.
ಆದಿತ್ಯ ನೌಕೆ ಈಗ ಭೂಮಿಯಿಂದ 256 ಕಿ.ಮೀ x 121973 ಕಿ.ಮೀ ಎತ್ತರದ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ ಎಂದು ಎಕ್ಸ್ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಇನ್ನು ಭೂಮಿಯ ಪರಿಭ್ರಮಣೆಯಲ್ಲಿರುವ ಆದಿತ್ಯ ಎಲ್1 ನೌಕೆಯನ್ನು ಭೂಮಿಯಿಂದ ಲಗ್ರಾಂಜಿಯನ್ ಪಾಯಿಂಟ್ 1 (ಎಲ್ 1) ಬಿಂದುವಿಗೆ ರವಾನಿಸುವ ಮುಂದಿನ ಪ್ರಕ್ರಿಯೆ ಸೆ.19 ರ ಮಧ್ಯರಾತ್ರಿ 2 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.