ಬೆಂಗಳೂರು,ಸೆ 15(DaijiworldNews/AK): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿಶ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮಾತಾಡಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವೇಗೌಡರಿಗೆ ಇಡೀ ದೇಶ ಗೌರವ ನೀಡುತ್ತದೆ. ಕಾಂಗ್ರೆಸ್ ಮುಕ್ತ ಮಾಡಬೇಕು ಅಂತ ಮೋದಿ ಹೇಳಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಗ್ಯಾರಂಟಿಗಳಿಂದ ಎಂದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲ. ಮೋದಿಯನ್ನು ಸೋಲಿಸಲು ಆಗಲ್ಲ. ದೇವೇಗೌಡರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.
ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಹೆಚ್ಡಿ ದೇವೇಗೌಡರು ಹೇಳಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. ನಾನು ಅಥವಾ ಪ್ರತಾಪ್ ಸಿಂಹ ಸಂಸದನಾಗಬೇಕು ಅಂತೇನಿಲ್ಲ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು, ಅದೇ ನಮ್ಮ ಗುರಿಯಾಗಿದೆ ಎಂದರು.
ದೇವೇಗೌಡರ ಬಗ್ಗೆ ನರೇಂದ್ರ ಮೋದಿ ನಂಬಿಕೆ ಇಟ್ಟಿದ್ದಾರೆ. ದೇವೇಗೌಡರಿಗೆ ಅಗೌರವ ತರುವ ಕೆಲಸ ಮಾಡಿಲ್ಲ. ದೇವೇಗೌಡರು ಸಣ್ಣ ಕಾರ್ಯಕರ್ತರನ್ನು ಬಿಟ್ಟು ಕೊಡಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಯಾರೂ ಭಯ ಬೀಳುವುದು, ಆತಂಕ ಪಡುವುದು ಬೇಡ ಎಂದು ಜಿಟಿ ದೇವೇಗೌಡ ಹೇಳಿದರು.
11 ತಿಂಗಳು ದೇವರಾಜು ಅರಸು ಅವರಿಗೆ ಯಾವ ರೀತಿ ನಡೆಸಿಕೊಂಡಿದ್ದೀರಿ? ಸಿದ್ದರಾಮಯ್ಯ ಅವರಿಗೆ ದೇವರಾಜು ಅರಸು ಪರಿಸ್ಥಿತಿ ಬರುವುದು ಬೇಡ. ದೇವರಾಜ್ ಅರಸು ಕುಟುಂಬಕ್ಕೆ ಒಂದು ಎಂಎಲ್ಸಿ ಸ್ಥಾನ ಕೊಟ್ಟಿಲ್ಲ. ಬಿಕೆ ಹರಿಪ್ರಸಾದ್ ಅದನ್ನು ಹೇಳಿದ್ದಾರೆ. ಇಷ್ಟಕ್ಕೆ ಹರಿಪ್ರಸಾದ್ ಅವರಿಗೆ ಹೈಕಮಾಂಡ್ ನೋಟಿಸ್ ನೀಡಿದೆ ಎಂದರು.