ನವದೆಹಲಿ, ಸೆ 20 (DaijiworldNews/MS): ಇನ್ನೆರಡು ದಿನಗಳಲ್ಲಿ ಸೂರ್ಯ ಚಂದ್ರನ ದಕ್ಷಿಣ ಧ್ರುವದ ಮೇಲೆ ಉದಯಿಸಲಿದ್ದಾನೆ. ಈ ನಡುವೆ ಸದ್ಯ ಸ್ಲೀಪ್ ಮೂಡ್ ನಲ್ಲಿರುವ ಚಂದ್ರಯಾನ-3 ರ ಲ್ಯಾಂಡರ್ ಮತ್ತು ರೋವರ್ ಮತ್ತೆ ಎಚ್ಚೆತ್ತುಕೊಳ್ಳುತ್ತದೆಯೇ? ಎಂದು ಇಸ್ರೋ ವಿಜ್ಞಾನಿಗಳು ಕಾಯುತ್ತಿದ್ದಾರೆ. ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ಸೂರ್ಯಾಸ್ತದ ನಂತರ ಸ್ಲೀಪ್ ಮೋಡ್ಗೆ ಕಳುಹಿಸಲಾಗಿತ್ತು.
ಸುಮಾರು -200ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಡೆದುಕೊಳ್ಳಲು ಮತ್ತು ರೀಚಾರ್ಜ್ ಆಗಬಹುದೇ ಎನ್ನುವ ಕುತೂಹಲವಿದೆ
ಈಗಾಗಲೇ ಪ್ರಗ್ಯಾನ್ ರೋವರ್ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಿದೆ. ಸೆಪ್ಟೆಂಬರ್ 22ರಂದು ಚಂದ್ರನು ಉದಯಿಸಿದಾಗ ಸೂರ್ಯನ ಬೆಳಕು ಅದರ ಸೌರ ಫಲಕಗಳ ಮೇಲೆ ಬೀಳುವ ರೀತಿಯಲ್ಲಿ ಇದನ್ನು ನಿಲ್ಲಿಸಲಾಗಿದೆ. ಇದರ ರಿಸೀವರ್ ಆನ್ ಆಗಿದೆ. ಇದು ಸೆಪ್ಟೆಂಬರ್ 22ರಂದು ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.