ಮೈಸೂರು, ಏ 11(SM): ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರ ಜೋರಾಗಿದ್ದು, ಮಂಡ್ಯ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಚುನಾವಣಾ ಪ್ರಚಾರದಲ್ಲಿರುವಂತಹ ಸಂದರ್ಭ ನಾಗಮಂಗಲ ಅನುಮತಿ ಪಡೆದ ಸಮಯಕ್ಕಿಂತಲೂ ಜಾಸ್ತಿ ಸಮಯ ಪ್ರಚಾರ ನಡೆಸಿದ ಆರೋಪದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತ್ತು ಬೆಂಬಲಿಗ ರವಿಕಾಂತ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳಗ್ಗೆ 8:30ಕ್ಕೆ ಆರಂಭವಾಗಬೇಕಿದ್ದ ಪ್ರಚಾರ ತಡವಾಗಿ ಆರಂಭಗೊಂಡಿತ್ತು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ.
ಇನ್ನು ಇದೇ ಕ್ಷೇತ್ರದ ವ್ಯಾಪ್ತಿಯ ಬೆಳ್ಳೂರು ಬಳಿ ತೆಂಗಿನ ತೋಟದಲ್ಲಿ ಕಾರ್ಯಕರ್ತರಿಗೆ ಊಟ ಹಂಚಿದ ಆರೋಪದ ಮೇಲೆ ಅಭ್ಯರ್ಥಿ ನಿಖಿಲ್ ಮತ್ತು ಬೆಂಬಲಿಗ ಕನಘಟ್ಟ ಶ್ರೀನಿವಾಸ್ ವಿರುದ್ಧ ಕೇಸು ದಾಖಲಾಗಿದೆ.