ಕಾಸರಗೋಡು, ಏ 11(SM): ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟನಂತೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ ಮನವಿಯನ್ನು ಹೊಸದುರ್ಗ ಜುಡಿಷಿಯಲ್ ಪ್ರಥಮ ದರ್ಜೆ ನ್ಯಾಯಾಲಯ ತಿರಸ್ಕರಿಸಿದೆ.
ಆರೋಪಿಗಳಾದ ಎ. ಪೀತಾಂಬರನ್, ಸಜಿ ಜೋರ್ಜ್, ಕೆ.ಎಂ. ಸುರೇಶ್, ಕೆ.ಅನಿಲ್ ಕುಮಾರ್, ಅಶ್ವಿನ್, ಶ್ರೀರಾಗ್, ಗಿಜಿನ್, ಎ. ಮುರಳಿ, ರಂಜಿತ್ ಜಾಮೀನು ಕೋರಿ ಅರ್ಹಿ ಸಲ್ಲಿಸಿದ್ದರು. ಆರೋಪಿಗಳಿಗೆ ಜಾಮೀನು ನೀಡಿದ್ದಲ್ಲಿ ತಲೆಮರೆಸಿಕೊಳ್ಳಲು ಹಾಗೂ ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಹಾಗೂ ಸಾಕ್ಷ್ಯ ನಾಶಕ್ಕೆ ಯತ್ನಿಸಬಹುದು ಎಂದು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದರು. ಕೃತ್ಯದಲ್ಲಿ ಶಾಮೀಲಾದ ಇನ್ನಷ್ಟು ಆರೋಪಿಗಳನ್ನು ಬಂಧಿಸಲು ಬಾಕಿ ಇದೆ ಎಂದು ಕ್ರೈಂ ಬ್ರಾಂಚ್ ತನಿಖಾ ತಂಡ ಅಭಿಪ್ರಾಯ ವ್ಯಕ್ತ ಪಡಿಸಿತ್ತು. ಇದರಿಂದ ಜಾಮೀನು ನೀಡದಿರಲು ನ್ಯಾಯಾಲಯ ತೀರ್ಮಾನಿಸಿದೆ.
ಫೆಬ್ರವರಿ 17ರಂದು ರಾತ್ರಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ತಂಡವು ಕೊಲೆಗೈದಿತ್ತು.