ಡಾರ್ಜಲಿಂಗ್, ಏ 11(SM): 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಹಿಂದೂ ಮತ್ತು ಬೌದ್ಧರನ್ನು ಹೊರತುಪಡಿಸಿ ಎಲ್ಲಾ ನುಸುಳುಕೋರರರನ್ನು ದೇಶದಿಂದ ಹೊರಗಟ್ಟುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎನ್ಆರ್ಸಿಯನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಗುವುದು ಎಂದಿದ್ದಾರೆ.
ಹಿಂದೂ ಮತ್ತು ಬೌದ್ಧ ನುಸುಳುಕೋರರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡಲಾಗುವುದು ಮತ್ತು ಭಾರತೀಯ ಪ್ರಜೆಗಳಾಗುವಂತೆ ಮಾಡಲಾಗುವುದು, ಉಳಿದ ನುಸುಳುಕೋರರನ್ನು ಗುರುತಿಸಿ ಹೊರಗಟ್ಟಲಾಗುವುದು ಎಂದಿದ್ದಾರೆ. ಮಮತಾ ಅವರು ಎನ್ಆರ್ಸಿ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 23 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.