ನವದೆಹಲಿ, ಸೆ 23 (DaijiworldNews/HR): ನೂತನ ಸಂಸತ್ ಭವನವನ್ನು 'ಮೋದಿ ಮಲ್ಪಿಪ್ಲೆಕ್ಸ್' ಎಂದು ಕಾಂಗ್ರೆಸ್ನ ಹಿರಿಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಯಕ ಜೈರಾಮ್ ರಮೇಶ್ ಕರೆದಿದ್ದಾರೆ.
ನೂತನ ಸಂಸತ್ ಭವನದ ಕುರಿತು ಮಾತನಾಡಿರುವ ಜೈರಾಮ್ ರಮೇಶ್, ಹಳೆಯ ಸಂಸತ್ತಿನಂತೆ ಹೊಸ ಸಂಸತ್ತಿನಲ್ಲಿ ಸದಸ್ಯರ ನಡುವೆ ಸಂವಾದಕ್ಕೆ ಸ್ಥಳವಿಲ್ಲ, ನೌಕರರಿಗೆ ಕೆಲಸ ಮಾಡಲು ಸೌಲಭ್ಯಗಳು ಸಿಗುತ್ತಿಲ್ಲ ಎಂದರು.
ಇನ್ನು 2024ರಲ್ಲಿ ಅಧಿಕಾರ ಬದಲಾವಣೆಯ ನಂತರ ಹೊಸ ಸಂಸತ್ತಿನ ಕಟ್ಟಡದ ಉತ್ತಮ ಬಳಕೆಗೆ ಮಾರ್ಗವನ್ನು ಕಂಡುಕೊಳ್ಳಲಾಗುವುದು. ಹೊಸ ಸಂಸತ್ ಕಟ್ಟಡವನ್ನು ಹೆಚ್ಚಿನ ಪ್ರಚಾರದೊಂದಿಗೆ ಉದ್ಘಾಟಿಸಿದ ರೀತಿ, ಇದು ಪ್ರಧಾನಿ ಮೋದಿಯವರ ಉದ್ದೇಶ ಸಾಕಾರಗೊಂಡಿದೆ. ಹೊಸ ಸಂಸತ್ತನ್ನು ವಾಸ್ತವವಾಗಿ ಮೋದಿ ಮಲ್ಟಿ ಕಾಂಪ್ಲೆಕ್ಸ್ ಎಂದು ಕರೆಯಬೇಕು ಎಂದಿದ್ದಾರೆ.