ಬೆಳಗಾವಿ, ಎ12(SS):2014ರ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬ ಮತದಾರರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು ಕು. ಚೈತ್ರಾ ಕುಂದಾಪುರ ಹೇಳಿದ್ದಾರೆ.
ನಮೋ ಯುಥ್ಸ್ ಹಮ್ಮಿಕೊಂಡಿದ್ದ 'ಸಮರ್ಥ ಭಾರತ, ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು' ವಿಷಯವಾಗಿ ದಿಕ್ಸೂಚಿ ಭಾಷಣ ಮಾಡಿದ ಅವರು, ಮೋದಿ ಪ್ರತಿಯೊಬ್ಬ ಮತದಾರರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಎಲ್ಲಿಯೂ ಹೇಳಿಲ್ಲ. ದೇಶದಲ್ಲಿನ ಭ್ರಷ್ಟರು ಸ್ವಿಸ್ ಬ್ಯಾಂಕಿನಲ್ಲಿ ಅಡಗಿಸಿಟ್ಟಿರುವ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತಂದರೆ ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ರೂ. ಹಾಕುವಷ್ಟು ದುಡ್ಡಿದೆ ಅಂತಾ ಮೋದಿ ಹೇಳಿರುವುದು ಎಂದು ಸ್ಪಷ್ಟಪಡಿಸಿದರು.
ತಾಕತ್ತಿದ್ದರೆ ಮೋದಿಯವರ ಈ ಕುರಿತಾದ ಹೇಳಿಕೆಯ ವಿಡಿಯೋ ಇದ್ದರೆ ಬಹಿರಂಗ ಪಡಿಸಲಿ. ಹಿಂದಿ ಬಾರದ ಪ್ರತಿ ಪಕ್ಷ ದವರು ಮತದಾರರ ದಿಕ್ಕು ತಪ್ಪಿಸಲು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.
ಭಾರತೀಯ ಜನತಾ ಪಾರ್ಟಿ ಪ್ರಜಾಪ್ರಭುತ್ವ ಎತ್ತಿ ಹಿಡಿಯಲು ದೇಶದ ಪ್ರಧಾನಿಯನ್ನಾಗಿ ನಿಸ್ವಾರ್ಥ ದೇಶ ಸೇವಕನನ್ನು ಆಯ್ಕೆ ಮಾಡುತ್ತಿದೆಯೇ ಹೊರತು, ಪ್ರತಿಪಕ್ಷ ದವರಂತೆ ವಂಶವಾಹಿ ಅಧಿಕಾರ ಚಲಾಯಿಸಿದ ಕುಟುಂಬಸ್ಥರನ್ನು ಅಲ್ಲ ಎಂದು ತಿಳಿಸಿದರು.