ಪಣಜಿ, 30 (DaijiworldNews/AK):ಗೋವಾ ರಾಜ್ಯದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಅತಿ ಹೆಚ್ಚು ಮಳೆ ಈ ವರ್ಷ ಸಂಭವಿಸಿದೆ. ಇದರಿಂದಾಗಿ ಕೆಲವೆಡೆ ಮರಗಿಡಗಳು ಧರೆಗುರುಳಿವೆ.
ಅಲ್ಲದೇ ಗೋವಾ ವಾಸ್ಕೊ ಸಡಾ ರುಮಡಾವಾಡಾ ಮಸೀದಿ ಬಳಿ ಅನೇಕ ಸ್ಥಳಗಳಲ್ಲಿ ಭೂ ಕುಸಿತ ಕಂಡು ಬಂದಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಭೂ ಕುಸಿತದಿಂದಾಗಿ ಗುಡ್ಡದ ಮೇಲಿದ್ದ ಮನೆಯ ಶೌಚಾಲ ಗುಡ್ಡದ ಕೆಳಭಾಗದಲ್ಲಿದ್ದ ಮತ್ತೊಂದು ಮನೆಯ ಮೇಲೆ ಬಿದ್ದಿದೆ. ಶನಿವಾರ ಮುಂಜಾನೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ.
ಮುರಗಾಂವ ನಗರಸಭಾ ಅಧ್ಯಕ್ಷ ಗಿರೀಶ್ ಬೋರಕರ್ ಮಾತನಾಡಿ, ಈ ಕುರಿತು ಸ್ಥಳೀಯ ಹಾನಿಗೊಳಗಾದ ಮನೆಗಳ ನಿವಾಸಿಗಳನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸಲಾಗುವುದು ಮತ್ತು ಅಪಾಯಕಾರಿ ಮನೆಗಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುವುದು ಎಂದು ಮುರಗಾಂವ ನಗರಸಭಾ ಅಧ್ಯಕ್ಷ ಗಿರೀಶ್ ಬೋರಕ ಮಾಹಿತಿ ನೀಡಿದ್ದಾರೆ.
ಅಲ್ಲದೇ ರಕ್ಷಣಾ ಗೋಡೆ ನಿರ್ಮಿಸುವ ಪ್ರಸ್ತಾವನೆ ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.