ಬೆಂಗಳೂರು,ಏ12(AZM):ಪ್ರಧಾನಿ ಮೋದಿಯವರು ಯೋಧರನ್ನು ಚುನಾವಣೆಗೆ ಬಳಸಿ ಭಾವನಾತ್ಮಕ ವಿಷಯಗಳ ಮೊರೆ ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಟ್ವೀಟರ್ ಮೂಲಕ ತಿರುಗೇಟು ನೀಡಿದ್ದಾರೆ.
ಮೋದಿ ಮತ್ತೆ ಸುಳ್ಳು ಹೇಳುತ್ತಿದ್ದಾರೆ. ಯೋಧರನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ. ಅವರ ಸರ್ಕಾರ ಮಾಡಿರುವ ಅಭಿವೃದ್ದಿ ಬಗ್ಗೆ ಮಾತನಾಡಲು ಏನಿಲ್ಲದೇ ಭಾವನಾತ್ಮಕ ವಿಷಯಗಳ ಮೊರೆ ಹೋಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯ ಬಿಜೆಪಿಯ ಕುತಂತ್ರಿ ಪೋಸ್ಟ್ ಗೆ ನಾನು ಈಗಾಗಲೇ ಸ್ಷಷ್ಟನೆ ನೀಡಿದ್ದೇನೆ, ಪ್ರಧಾನಿ ಮೋದಿ ಅವರು ಈ ತಪ್ಪು ಮಾಹಿತಿಗಳನ್ನೆ ನೆಚ್ಚಿಕೊಂಡಿರುವುದು ವಿಷಾದನೀಯ ಎಂದರು. ಸೈನಿಕರು ಹಾಗೂ ದೇಶದ ಹೆಸರಿನಲ್ಲಿ ಲಾಭ ಮಾಡಿಕೊಳ್ಳುವ ಅವರ ನಡೆ ಸರಿಯಲ್ಲ, ಅವರ ಸರ್ಕಾರ ಮಾಡಿರುವ ಅಭಿವೃದ್ದಿ ಬಗ್ಗೆ ಮಾತನಾಡಲು ಏನಿಲ್ಲದೇ ಭಾವನಾತ್ಮಕ ವಿಷಯಗಳ ಮೊರೆ ಹೋಗಿದ್ದಾರೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.