ಆಂಧ್ರಪ್ರದೇಶ, 02 (DaijiworldNews/HR): ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದೆ.
ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಪ್ರತ್ಯೇಕ ತಂಡ ರಚಿಸಿಕೊಂಡ ಎನ್ಐಎ ತಂಡಗಳು ರಾಜ್ಯ ಪೊಲೀಸ್ ಪಡೆಗಳೊಂದಿಗೆ ದಾಳಿ ನಡೆಸುತ್ತಿದೆ.
ಇನ್ನು ಶೋಧ ನಡೆಸುತ್ತಿರುವ ಸ್ಥಳಗಳಲ್ಲಿ ಬಹುತೇಕ ಮಂದಿ ನಕ್ಸಲೀಯರೊಂದಿಗೆ ನಂಟು ಹೊಂದಿರುವ ಶಂಕೆ ಇದ್ದು, ಆಗಸ್ಟ್ 2023 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 9 ರಂದು, ಎನ್ಐಎ ತೆಲಂಗಾಣ ಮತ್ತು ಛತ್ತೀಸ್ಗಢದಲ್ಲಿ ದಾಳಿ ಮತ್ತು ಹುಡುಕಾಟಗಳನ್ನು ನಡೆಸಿತ್ತು. ಅದರಲ್ಲಿ ಸ್ಫೋಟಕ ವಸ್ತು, ಡ್ರೋನ್ ಮತ್ತು ಲ್ಯಾಥ್ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.