ಕೋಲಾರ,ಏ.12(AZM): ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ನಾಳೆ (ಏ.13) ಕೋಲಾರಕ್ಕೆ ಆಗಮಿಸಿ ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ.
ರಾಹುಲ್ಗಾಂಧಿ ಬರುವ ನಿಮಿತ್ತ ಬಂದೋಬಸ್ತ್ ವ್ಯವಸ್ಥೆ ಸರ್ಕಾರಿ ನಿಯಮಗಳಂತೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸಪಟ್ ತಿಳಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದ್ದು, ರಾಜಧಾನಿ ಬೆಂಗಳೂರಿಗೆ ಬಂದು ನಂತರ ಹೆಲಿಕಾಫ್ಟರ್ನಲ್ಲಿ ಕೋಲಾರಕ್ಕೆ ಬರಲಿದ್ದಾರೆ.
ಕ್ರೀಡಾಂಗಣದಲ್ಲಿ ನಿರ್ಮಿಸಿರುವುವ ಎರಡು ದ್ವಾರಗಳ ಮೂಲಕ ಸಾರ್ವಜನಿಕರ ಪ್ರವೇಶವಿದ್ದು, ಆಗಮಿಸುವ ಪ್ರತಿ ಮಹಿಳೆ, ಪುರುಷರನ್ನು ತಪಾಸಣೆಗೆ ಒಳಪಡಿಸಲಾಗುವುದು. ಕ್ರೀಡಾಂಗಣಕ್ಕೆ ಬರುವವರು ಮೊಬೈಲ್ ಫೋನ್, ಮಾದಕ ವಸ್ತುಗಳು, ಬೆಂಕಿಪೊಟ್ಟಣ, ಸಿಗರೇಟು, ತಂಬಾಕು ಪದಾರ್ಥಗಳು, ಯಾವುದೇ ಆಯುಧ ಲಗೇಜ್, ನೀರಿನ ಬಾಟಲ್ ತರುವುದನ್ನು ನಿಷೇಧಿಸಲಾಗಿದೆ.
ಬಂದೋಬಸ್ತ್ ವ್ಯವಸ್ಥೆಗಾಗಿ ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೆಜಿಎಫ್ ಜಿಲ್ಲೆಗಳಿಂದ ನಾಲ್ಕು ಜನ ಎಸ್ಪಿಗಳು, ಹೆಚ್ಚುವರಿ ಎಸ್ಪಿಗಳು, 150 ಅಧಿಕಾರಿಗಳು, ಸಾವಿರಕ್ಕೂ ಹೆಚ್ಚು ಹೆಡ್ಕಾನ್ಸ್ಟೇಬಲ್ ಮತ್ತು ಪಿಸಿಗಳು ಇದ್ದು, ಇದಲ್ಲದೆ ಜಿಲ್ಲಾ ಸಶಸ್ತ್ರದಳ, ಕೆಎಸ್ಆರ್ ಪಿ ತುಕಡಿಗಳು ಬಂದೋಬಸ್ತ್ ವ್ಯವಸ್ಥೆಯಲ್ಲಿರುತ್ತವೆ.