ಜಾರ್ಖಾಂಡ್, ಅ 05 (DaijiworldNews/HR): ಕೋಚಿಂಗ್ ಇಲ್ಲದೆ ಅತ್ಯಂತ ಕಠಿಣ ಯುಪಿಎಸ್ ಸಿ ಪರೀಕ್ಷೆಯನ್ನು ಬರೆದು ಯಶಸ್ವಿಯಾಗಿ ಎಐಆರ್ ಪಡೆದುಕೊಂಡ ಐಎಸ್ ಸಲೋನಿ ವರ್ಮಾ ಅವರ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.
ಕಠಿಣ ಪರಿಶ್ರಮ ಮತ್ತು ಕಲಿಯುವಿಕೆಯಲ್ಲಿ ಸಲೋನಿ ವರ್ಮಾ ಅವರಿಗಿರುವ ಆಸಕ್ತಿ ಎಲ್ಲಾ ಆಕಾಂಕ್ಷಿಗಳಿಗೂ ಮಾದರಿಯಾಗಿದೆ.
ಇನ್ನು ಯುಪಿಎಸ್ ಸಿ ಪರೀಕ್ಷೆಯನ್ನು ಬರೆದು ಐಎಸ್, ಐಪಿಎಸ್, ಹಾಗೂ ಐಎಫ್ ಎಸ್ ಅಧಿಕಾರಿಗಳಾಗಬೇಕು ಎನ್ನುವುದು ಬಹಳ ಜನರ ಕನಸಾಗಿರುತ್ತದೆ, ಆದರೆ ಆ ಅವಕಾಶ ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಅದನ್ನು ನನಸಾಗಿಸಲು ಸಾಧ್ಯವಾಗುತ್ತದೆ.
ವಿಶ್ವದ ಅತ್ಯಂತ ಕಠಿಣ ನೇಮಕಾತಿ ಪರೀಕ್ಷೆಗಳಲ್ಲಿ ಒಂದಾದ ಈ ಪರೀಕ್ಷೆಗೆ ಹಾಜರಾಗಲು ಅರ್ಜಿ ಸಲ್ಲಿಸುತ್ತಾರೆ. ಒಂದೇ ಬಾರಿಗೆ ಪರೀಕ್ಷೆಯಲ್ಲಿ ಉತ್ತಿರ್ಣರಾಗಲು ಆಗುವುದಿಲ್ಲ ಅದಾಕ್ಕಾಗಿ ವಿದ್ಯಾರ್ಥಿಗಳು ಸತತ 2ರಿಂದ 3 ವರ್ಷಗಳ ಕಾಲ ತಯಾರಿಗಳನ್ನು ನಡೆಸಬೇಕಾಗುತ್ತದೆ.
2020ರಲ್ಲಿ ಯುಪಿಎಸ್ ಪರೀಕ್ಷೆಯಲ್ಲಿ 70ನೇ ರ್ಯಾಂಕ್ ಪಡೆದು ತೆರ್ಗಡೆಯಾದ ಐಎಎಸ್ ಅಧಿಕಾರಿ ಸಲೋನಿ ವರ್ಮಾ ಅವರು ಜಾರ್ಖಂಡ್ನ ಜಮ್ಶೆಡ್ಪುರ ಮೂಲದವರಾಗಿದ್ದು ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.
ವರ್ಮಾ ಅವರು ಪದವಿಯ ನಂತರ ಯುಪಿಎಸ್ ಸಿ ತಯಾರಿಯನ್ನು ಪ್ರಾರಂಭಿಸಿದ್ದು, ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್ ಸಿ ಪರೀಕ್ಷೆಗೆ ಸ್ವಯಂ ಅಧ್ಯಯನ ಮಾಡಿ ಯಶಸ್ವಿಯಾಗಿದ್ದಾರೆ.