ಬೆಂಗಳೂರು, ಅ 05 (DaijiworldNews/MS): ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಮಂಡ್ಯದ ಕೆಆರ್ಎಸ್ ಡ್ಯಾಮ್ಗೆ ಮುತ್ತಿಗೆ ಹಾಕಲಿದ್ದಾರೆ.
ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯಿಂದ ರ್ಯಾಲಿ ನಡೆಸೋಕೆ ವಾಟಾಳ್ ನಾಗಾರಾಜ್ ಸಜ್ಜಾಗಿದ್ದು, ಸುಮಾರು 5 ಸಾವಿರ ಕಾರುಗಳು ಹಾಗೂ 20 ಸಾವಿರ ಬೈಕ್ಗಳ ಜತೆಗೆ ಮಂಡ್ಯ ಜಿಲ್ಲೆಯ ಕೆಆರ್ಎಸ್ಗೆ ತೆರಳಲು ಯೋಜನೆ ರೂಪಿಸಲಾಗಿದೆ. ಮೈಸೂರು ಬ್ಯಾಂಕ್ ಸರ್ಕಲ್ನಿಂದ ಆರಂಭವಾಗಲಿರುವ ರ್ಯಾಲಿ, ಕೆಆರ್ಎಸ್ ತನಕ ಸಾಗಲಿದ್ದು, ಬಳಿಕ ಕೆಆರ್ಎಸ್ ಮುತ್ತಿಗೆ ಹಾಕಿ ಪ್ರತಿಭಟಿಸಲು ತಯಾರಿ ನಡೆದಿದೆ.
ಮೈಸೂರು ಬ್ಯಾಂಕ್ ಸರ್ಕಲ್, ಕೆಜಿ ರೋಡ್, ಶಾಂತಲಾ ಸಿಲ್ಕ್ ಹೌಸ್ , ಕಾಟನ್ ಪೇಟೆ ಮೈನ್ ರೋಡ್, ಮೈಸೂರು ಸರ್ಕಲ್, ಗಾಳಿ ಆಂಜನೇಯ ಸ್ವಾಮಿ ದೇವಾಲಯ, ಬಿಎಚ್ಇಎಲ್, ರಾಜರಾಜೇಶ್ವರಿ ನಗರ, ಜ್ಞಾನಭಾರತಿ ಜಂಕ್ಷನ್, ಕೆಂಗೇರಿ, ವಿಶ್ವ ಒಕ್ಕಲಿಗರ ಸಂಘ, ಆರ್ ಆರ್ ಡೆಂಟಲ್ ಕಾಲೇಜು, ಕುಂಬಲಗೋಡು, ಬಿಡದಿ, ರಾಮನಗರದ ಐಜೂರು ಗೇಟ್ ಬಳಿ ಪ್ರತಿಭಟನೆ ಅಲ್ಲಿ ರೈತರು ಕನ್ನಡಪರ ಹೋರಾಟಗಾರರು ರ್ಯಾಲಿ ಗೆ ಸೇರಿಕೊಳ್ಳುತ್ತಾರೆ, ಮದ್ದೂರಿನಲ್ಲಿ ರ್ಯಾಲಿ ಗೆ ರೈತ ರಿಂದ ಸ್ವಾಗತ, ಮಂಡ್ಯದಲ್ಲಿ ಕಾವೇರಿಗಾಗಿ ಪ್ರತಿಭಟನೆ ಮಾಡುತ್ತಿರುವ ರೈತರ ಭೇಟಿ ನಂತರ ಮೈಸೂರು ನಿಂದ ಬರುವ ರೈತರ ಜೊತೆ ಸೇರಿ ಶ್ರೀರಂಗಪಟ್ಟಣ, ಪಂಪ್ ಹೌಸ್ ರ್ಯಾಲಿ
ಸಾಗಲಿದೆ.