ತೀರ್ಥಹಳ್ಳಿ, ಅ 07 (DaijiworldNews/HR): ಆರ್.ಎಂ.ಮಂಜುನಾಥ್ ಗೌಡರ ಮನೆ ಮೇಲೆ ಇಡಿ ದಾಳಿ ಆಗಿದ್ದು, ಅದನ್ನು ನಾನು ಮಾಡಿಸಿದ್ದೇನೆ ಎಂದು ಪ್ರತಿಭಟನೆ ಮಾಡಿ ಕಾಂಗ್ರೆಸ್ ನವರು ಹೇಳಿದ್ದಾರೆ. ವಾಮಮಾರ್ಗದಿಂದ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಶಾಸಕ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಕೇಳಿದ್ದಾರೆ ಗೆಣಸು ತಿನ್ನುತ್ತಿದ್ರಾ ಎಂದು. ನಾವು ಗೆಣಸು ತಿಂದೆ ಬೆಳೆದಿದ್ದು, ನಾನು ಸೋತಾಗ ನನ್ನ ಮೇಲೆ ಜ್ಞಾನೇಂದ್ರ ಕಾಯಂ ಆಗಿ ಗುಡ್ಡೆಕೊಪ್ಪದಲ್ಲಿ ದೋಸೆ ಮಾಡಬೇಕು ಎಂದಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇವರ ಹಾಗೆ ನಾವು ಚಿನ್ನದ ಚಮಚ ಕಚ್ಚಿಕೊಂಡು ಹುಟ್ಟಿದವರಲ್ಲ, ಆರ್ .ಎಂ. ಮಂಜುನಾಥ್ ಗೌಡರ ಮನೆ ಮೇಲೆ ನೆಡೆದ ಇಡಿ ದಾಳಿಯಿಂದ ಅತ್ಯಂತ ಸಂತೋಷ ಪಟ್ಟ ವ್ಯಕ್ತಿ ಯಾರು ಎಂದರೆ ಅದು ಅವರೇ ಎಂದು ಕಿಮ್ಮನೆ ರತ್ನಾಕರ್ ಗೆ ಟಾಂಗ್ ನೀಡಿದ್ದಾರೆ.