ಹರಿಯಾಣ, ಅ 08 (DaijiworldNews/HR): UPSC ಪರೀಕ್ಷೆ ತಯಾರಿಗಾಗಿ 2 ವರ್ಷ ಮಗನಿಂದ ದೂರವಿದ್ದು 2ನೇ ರ್ಯಾಂಕ್ ಪಡೆದ ಅನು ಕುಮಾರಿ ಅವರ ಯಶೋಗಾಥೆ ಇದಾಗಿದೆ.
ದೇಶಾದ್ಯಂತ ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗುತ್ತಾರೆ. ಅವರಲ್ಲಿ ಕೆಲವರು ಮಾತ್ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ.
2017 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಪಡೆದ ಅನು ಕುಮಾರಿ ಅವರು ಮಗನಿಂದ ದೂರ ಉಳಿದುಕೊಂಡು ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.
ಇನ್ನು ಐಎಎಸ್ ಅಧಿಕಾರಿ ಅನು ಕುಮಾರಿ ಹರಿಯಾಣದ ಸೋನಿಪತ್ ಮೂಲದವರಾಗಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಬಿಎಸ್ಸಿ ಪದವಿಯನ್ನು ಪಡೆದಿದ್ದು, ನಾಗ್ಪುರದ ಐಎಂಟಿಯಿಂದ ಫೈನಾನ್ಸ್ ಮತ್ತು ಮಾರ್ಕೆಟಿಂಗ್ ವಿಷಯದಲ್ಲಿ ಎಂಬಿಎ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ.
ಐಎಎಸ್ ಅಧಿಕಾರಿ ಅನು ಕುಮಾರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಅವರು ಆ ಕೆಲಸವನ್ನು ತೊರೆದು ತಮ್ಮ ಕನಸಿನ ಐಎಎಸ್ ಅಧಿಕಾರಿಯಾಗುವ ಕಡೆಗೆ ಮುನ್ನಡೆದಿದ್ದಾರೆ.
ನನ್ನ ಕೆಲಸ ಚೆನ್ನಾಗಿಯೇ ಆದರೆ ನನಗೆ ಅದರಲ್ಲಿ ತೃಪ್ತಿ ಇರಲಿಲ್ಲ. ಎಲ್ಲವೂ ಎಷ್ಟು ಯಾಂತ್ರಿಕವಾಯಿತು ಎಂದರೆ ಒಂದು ಹಂತದಲ್ಲಿ ನಾನು ಅದನ್ನು ಸಹಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.