ನವದೆಹಲಿ, ಅ 11 (DaijiworldNews/MS): ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಒಂದು ಕಾಲದ ಬಡ ಹುಡುಗ ತನ್ನ ಸ್ವಸಾಮರ್ಥ್ಯದಿಂದ ಬಿಲಿಯನೇರ್ ಆಗಿ ಬೆಳೆದುನಿಂತಿದ್ದಾರೆ.
1993ರಲ್ಲಿ ಕಟಕ್ನ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ್ದು, ಅವರ ಕುಟುಂಬವು ದಕ್ಷಿಣ ಒಡಿಶಾದ ರಾಯಗಡ ಎಂಬ ನಗರದಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಸೇಂಟ್ ಜಾನ್ಸ್ ಪ್ರಾಥಮಿಕ ಶಾಲೆಯಲ್ಲಿ ಮಾಡಿದ್ದು, ಬಳಿಕ ಕಾಲೇಜು ಶಿಕ್ಷಣಕ್ಕಾಗಿ 2011ರಲ್ಲಿ ದೆಹಲಿಗೆ ಶಿಫ್ಟ್ ಆಗಿದ್ದರು. ಆದರೆ ಎರಡು ವರ್ಷಗಳ ಬಳಿಕ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ರಿತೇಶ್ ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ ಒರಾವೆಲ್ ಸ್ಟೇಸ್ ಎಂಬ ಏರ್ಬಿಎನ್ಬಿ ಎಂಬ ಸ್ಟಾರ್ಟಪ್ ಆರಂಭಿಸಿದರು. 2013ರಲ್ಲಿ ಥಿಯೆಲ್ ಫೆಲೋಶಿಪ್ ಪ್ರೋಗ್ರಾಮ್ನಲ್ಲಿ ಗೆದ್ದ ಹಣದ ಸಹಾಯದಿಂದ ಓಯೊ ರೂಮ್ಗಳನ್ನು ಪ್ರಾರಂಭಿಸಿದ್ದರು
ಈ ಕಂಪನಿಯು ಪ್ರಪಂಚದಾದ್ಯಂತ ಹೋಟೆಲ್ಗಳು ಮತ್ತು ಹೋಮ್ ಸ್ಟೇಗಳನ್ನು ಗುತ್ತಿಗೆ ಮತ್ತು ಫ್ರಾಂಚೈಸ್ ಮಾಡುತ್ತದೆ. ಪ್ರಸ್ತುತ 80 ದೇಶಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿಕೊಂಡಿದೆ.
2013ರ ನಂತರ ಓಯೋ ಕಂಪನಿ ತುಂಬಾ ವೇಗವಾಗಿ ಬೆಳೆಯಿತು, ಸೆಪ್ಟೆಂಬರ್ 2018ರಲ್ಲಿ 1 ಬಿಲಿಯನ್ ಹಣವನ್ನು ಸಂಗ್ರಹಿಸಿತು. ಜುಲೈ 2019ರಲ್ಲಿ, ರಿತೇಶ್ ಇತರ ಹೂಡಿಕೆದಾರರಿಂದ 2 ಶತಕೋಟಿ ಮೌಲ್ಯದ ಷೇರುಗಳನ್ನು ಹಿಂತೆಗೆದುಕೊಂಡರು, ಅದು ಕಂಪನಿಯ ಮೌಲ್ಯವನ್ನು 10 ಶತಕೋಟಿಗೆ ಹೆಚ್ಚಿಸಿತು.
29 ವರ್ಷದ ರಿತೇಶ್ ಅಗರ್ವಾಲ್ ಈಗ ಭಾರತದ ಎರಡನೇ ಅತಿ ಕಿರಿಯ ಬಿಲಿಯನೇರ್ ಆಗಿ ಹೊರ ಹೊಮ್ಮಿದ್ದಾರೆ.